Breaking News

1 ಕಪ್​ ಟೀಗೆ ಕೇವಲ 5 ರೂ. ತಿಂಗಳಿಗೆ 2.5 ಲಕ್ಷ ಸಂಪಾದನೆ! ಸಿಂಪಲ್​ ಆಗಿದೆ ಈ ಟೀ ವ್ಯಾಪಾರಿಯ ಬಿಜಿನೆಸ್​ ಟ್ರಿಕ್ಸ್​​

Spread the love

ಹಾವು ಭಾರತೀಯರ ನೆಚ್ಚಿನ ಪಾನೀಯಗಳಲ್ಲಿ ಒಂದಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಚಹಾ ಕುಡಿಯುವ ಮಂದಿ ನಮ್ಮ ದೇಶದಲ್ಲಿದ್ದಾರೆ. ಬಹುತೇಕರ ದಿನದ ಆರಂಭ ಟೀನಿಂದಲೇ ಶುರುವಾಗುತ್ತದೆ. ಒಂದು ಹೊತ್ತು ಊಟ ಬೇಕಾದರೂ ಬಿಡುತ್ತೇನೆ ಆದರೆ, ಟೀ ಬಿಡುವುದಿಲ್ಲ ಎಂದು ಹೇಳುವ ಜನರು ಕೂಡ ನಮ್ಮ ನಡುವೆ ಇದ್ದಾರೆ.

1 ಕಪ್​ ಟೀಗೆ ಕೇವಲ 5 ರೂ. ತಿಂಗಳಿಗೆ 2.5 ಲಕ್ಷ ಸಂಪಾದನೆ! ಸಿಂಪಲ್​ ಆಗಿದೆ ಈ ಟೀ ವ್ಯಾಪಾರಿಯ ಬಿಜಿನೆಸ್​ ಟ್ರಿಕ್ಸ್​​

ಅಷ್ಟೊಂದು ಜನಪ್ರಿಯವಾಗಿದೆ ಈ ಪಾನೀಯ.

ಕೆಲಸದ ಸಮಯದಲ್ಲಿ ಮತ್ತು ಪ್ರಯಾಣದ ಸಮಯದಲ್ಲಿ ಚಹಾ ವಿರಾಮವನ್ನು ಯಾರು ತಾನೇ ಇಷ್ಟಪಡುವುದಿಲ್ಲ? ಅದರಲ್ಲೂ ಚಳಿಯಲ್ಲಿ ಟೀ ಇದ್ದರೆ ಸ್ವರ್ಗಕ್ಕೆ ಮೂರೇ ಗೇಣು ಅಂತಾರೆ! ಆದರೆ, ನಾವೀಗ ಹೇಳ ಹೊರಟಿರುವುದು ಚಹಾದ ವಿಶೇಷತೆ ಬಗ್ಗೆ ಅಲ್ಲ, ಇದು ಚಹಾ ವ್ಯಾಪಾರಿಯೊಬ್ಬರ ಆದಾಯದ ಬಗ್ಗೆ.

ಟೀ ಅಂಗಡಿ ಎಲ್ಲಿ ಬೇಕಾದರೂ ಸಿಗುತ್ತದೆ. ಆದರೆ, ಎಲ್ಲರಿಗೂ ಯಶಸ್ಸು ಸಿಗುವುದಿಲ್ಲ. ಕೆಲವರು ತೆರೆದಷ್ಟೇ ವೇಗವಾಗಿ ಅಂಗಡಿಯನ್ನು ಮುಚ್ಚುತ್ತಾರೆ. ಆದರೆ, ಕೆಲವರು ತಮ್ಮ ವಿನೂತನ ಬಿಜಿನೆಸ್​ ಟ್ರಿಕ್ಸ್​ ಮೂಲಕ ಒಳ್ಳೆಯ ಯಶಸ್ಸು ಗಳಿಸುತ್ತಾರೆ. ಅದೇ ರೀತಿ ಇಲ್ಲೊಬ್ಬ ಟೀ ವ್ಯಾಪಾರಿ ತನ್ನ ವಿಶಿಷ್ಟ ಚಿಂತನೆಯ ಮೂಲಕ ಅದ್ಧೂರಿ ಯಶಸ್ಸು ಸಾಧಿಸಿದ ಕತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ಮಹಾರಾಷ್ಟ್ರದ ಮಹದೇವ್ ಮಾಲಿ ಎಂಬುವರು ಟೀ ವ್ಯಾಪಾರದ ಮೇಲೆ ಪೂರ್ಣ ಗಮನಹರಿಸಿದ್ದಾರೆ. ಇಡೀ ಕುಟುಂಬ ಟೀ ಅಂಗಡಿಯನ್ನೇ ನಂಬಿ ಬದುಕುತ್ತಿದೆ. ಅದಕ್ಕೆ ತಕ್ಕಂತೆಯೇ ಆದಾಯವೂ ಬರುತ್ತಿದೆ. ಮೂರನೇ ತರಗತಿವರೆಗೆ ಓದಿರುವ ಮಹದೇವ್ ಕಳೆದ 20 ವರ್ಷಗಳಿಂದ ಟೀ ಅಂಗಡಿ ನಡೆಸುತ್ತಿದ್ದಾರೆ.

ಮಹದೇವ್​ ಅವರು ಫೋನ್ ಮೂಲಕವೂ ಟೀ ಆರ್ಡರ್ ತೆಗೆದುಕೊಳ್ಳುವ ತಂತ್ರವನ್ನು ಬಳಸುತ್ತಿದ್ದಾರೆ. ಆರ್ಡರ್​ಗಳನ್ನು ತೆಗೆದುಕೊಳ್ಳುವುದಲ್ಲದೆ, ಅವುಗಳನ್ನು ಸಮಯಕ್ಕೆ ಸರಿಯಾಗಿ ತಲುಪಿಸಲಾಗುತ್ತದೆ. ಮಹಾದೇವ್ ಅವರು ತಮ್ಮ ಪ್ರದೇಶದಲ್ಲಿ ಸುಮಾರು 15,000 ಜನರಿಂದ ಆರ್ಡರ್ ತೆಗೆದುಕೊಳ್ಳುತ್ತಾರೆ.

ಮಹದೇವ್​ ಅವರು ದಿನಕ್ಕೆ 50 ರಿಂದ 60 ಲೀಟರ್ ಹಾಲನ್ನು ಚಹಾ ಮಾಡಲು ಬಳಸುತ್ತಾರೆ. ಮಹದೇವ್ ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರರು ನಿತ್ಯವೂ ಸಹಾಯ ಮಾಡುತ್ತಾರೆ. ಒಂದು ಕಪ್ ಟೀಗೆ ಐದು ರೂಪಾಯಿ ಮಾತ್ರ ತೆಗೆದುಕೊಳ್ಳುತ್ತಾರೆ. ಮಹಾದೇವ್ ಅವರು ಪ್ರತಿದಿನ 1,500 ರಿಂದ 2,000 ಕಪ್ ಚಹಾವನ್ನು ಮಾರಾಟ ಮಾಡುತ್ತಾರೆ ಮತ್ತು ದಿನಕ್ಕೆ ಸುಮಾರು 7,000 ರಿಂದ 10,000 ರೂಪಾಯಿಗಳನ್ನು ಗಳಿಸುತ್ತಾರೆ. ತಿಂಗಳ ಆದಾಯ ಲೆಕ್ಕ ಹಾಕಿದರೆ ಲಕ್ಷಗಟ್ಟಲೆ ಬರಲಿದೆ. ಅದೇನೇ ಇರಲಿ, ಮಹದೇವ್ ಅವರ ಈ ಐಡಿಯಾ ಹಿಟ್ ಆಗಿದ್ದು, ಉತ್ತಮ ಆದಾಯ ಗಳಿಸುತ್ತಿದ್ದಾರೆ. 


Spread the love

About Laxminews 24x7

Check Also

ಹೋಳಿ ಹಬ್ಬದ ಪೂರ್ವದಲ್ಲೇ ಬೆಳಗಾವಿ ಖಡೇಬಝಾರ್ ಪೊಲೀಸರು ಭರ್ಜರಿ ಕಾರ್ಯಾಚರಣೆ

Spread the love ಹೋಳಿ ಹಬ್ಬದ ಪೂರ್ವದಲ್ಲೇ ಬೆಳಗಾವಿ ಖಡೇಬಝಾರ್ ಪೊಲೀಸರು ಭರ್ಜರಿ ಕಾರ್ಯಾಚರಣೆಯನ್ನು ನಡೆಸಿದ್ದು, ಬೆಳಗಾವಿಯ ಗುಡಶೆಡ್ ರಸ್ತೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ