Breaking News

ಸಿಎಂ ಬದಲಾವಣೆ ಬಗ್ಗೆ ಕೋಡಿಮಠದ ಸ್ವಾಮೀಜಿಯಿಂದ ಸ್ಫೋಟಕ ಭವಿಷ್ಯ

Spread the love

ಪ್ರಕೃತಿ ವಿಕೋಪಗಳು ಮುಂದುವರಿಯಲಿದ್ದು, ರಾಜನ ಮೇಲೂ ಭಂಗ ಬರಲಿದೆ ಎಂದು ಹಾಸನದ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ

ಹಾಸನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರಾಕೃತಿಕ ವಿಕೋಪಗಳು ಮುಂದುವರಿಯಲಿದೆ.

ಪಂಚಭೂತಗಳಿಂದ ದೋಷ ಇದ್ದು ಆಕಾಶದಲ್ಲೂ ದೊಡ್ಡ ಪರಿಣಾಮ ಬೀರಲಿದ್ದು, ಇದು ರಾಜನಿಗೂ ಭಂಗ ಆಗಲಿದೆ ಎಂದರು.

ಸಿಎಂ ಬದಲಾವಣೆ ಬಗ್ಗೆ ಕೋಡಿಮಠದ ಸ್ವಾಮೀಜಿಯಿಂದ ಸ್ಫೋಟಕ ಭವಿಷ್ಯ

ಕರ್ನಾಟಕದ ಮುಖ್ಯಮಂತ್ರಿ ಬದಲಾಗುತ್ತಾರಾ ಎಂಬ ಪ್ರಶ್ನೆಗೆ ಇದು ನ್ಯಾಯಾಲಯದಲ್ಲಿ ಇರುವುದರಿಂದ ನಾನು ಮಾತನಾಡುವುದು ಸರಿಯಾಗುವುದಿಲ್ಲ. ಆದರೆ ಸಿಎಂ ಸ್ಥಾನದ ಬಗ್ಗೆ ಮೂರು ತಿಂಗಳ ಹಿಂದೆ ಧಾರವಾಡದಲ್ಲಿಯೇ ಹೇಳಿದ್ದೇನೆ ಎಂದರು.

ಅಭಿಮನ್ಯುವಿನ ಬಿಲ್ಲನ್ನು ಕರ್ಣನ ಕೈಯಿಂದ ಮೋಸದಲ್ಲಿ ದಾರ ಕಟ್ಟು ಮಾಡಿಸ್ತಾರೆ. ಮಹಾಭಾರತದಲ್ಲಿ ಕೃಷ್ಣ ಇದ್ದ ಗಧಾಯುದ್ದದಲ್ಲಿ ಭೀಮ ಗೆದ್ದ. ಈಗ ಕೃಷ್ಣ ಇಲ್ಲ. ದುರ್ಯೋಧನ ಗೆಲ್ತಾನೆ. ಅದರರ್ಥ ಏನೆಂಬುದನ್ನು ಮುಂದೆ ಹೇಳುತ್ತೇನೆ. ಕೇಂದ್ರದಲ್ಲೂ ಮತ್ತು ರಾಜ್ಯದಲ್ಲೂ ಇದೇ ಮಾತು ಅನ್ವಯವಾಗಲಿದೆ ಎಂದು ಹೇಳಿದ್ದಾರೆ.

ಜಗತ್ತಿನಲ್ಲಿ ಮಳೆಯ ಭೀಕರತೆಯ ಕುರಿತು ಮಾತನಾಡಿದ್ದು, ಜನರು ಇದ್ದಂಗೆ ಸಾಯ್ತಾರೆ ಎಂದಿದ್ದೆ. ಜಗತ್ತಿನ ಹಲವು ಭಾಗ ಮುಳುಗುತ್ತದೆ ಅಂತ ಹೇಳಿದ್ದೆ. ಅದರಂತೆ ಎಲ್ಲವೂ ಆಗುತ್ತದೆ. ಇನ್ನು ಮಳೆ ಇದೆ. ಪ್ರಾಕೃತಿಕ ದೋಷ ಹೆಚ್ಚಾಗುತ್ತದೆ. ಐದು ವಿಧದಿಂದ ತೊಂದರೆ ಎದುರಾಗುತ್ತದೆ. ಭೂಮಿ ಅಗ್ನಿ ವಾಯು ಎಲ್ಲದರಿಂದ ತೊಂದರೆ ಎದುರಾಗುತ್ತದೆ. ಇನ್ನು ಒಂದು ಆಕಾಶದಲ್ಲಿ ಆಗೋ ದೊಡ್ಡ‌ಸುದ್ದಿ‌ ಇದೆ. ಒಂದು ಆಕಾಶ ಥ್ವ ಪ್ರಕಾರ ತೊಂದರೆ ಆಗಬಹುದು. ಅದು ರಾಜ್ಯ ಮೇಲೆ ಪರಿಣಾಮ ಬೀರುತ್ತದೆ ಎಂದು ಭವಿಷ್ಯ ಹೇಳಿದ್ದಾರೆ.


Spread the love

About Laxminews 24x7

Check Also

ರಸ್ತೆಗುಂಡಿ ಮುಚ್ಚಲು ನೀಡಿದ್ದ ಗಡುವು ಅಂತ್ಯ: ‘Please ask D.K.Shivakumar’ ಎಂದ ಸಿದ್ದರಾಮಯ್ಯ

Spread the loveಬೆಂಗಳೂರು: ರಾಜಧಾನಿಯಲ್ಲಿ ಹಾಳಾಗಿರುವ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳಿಗೆ ನೀಡಿದ್ದ ಗಡುವು ಇಂದಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ