ಬೆಳಗಾವಿ, ಸೆಪ್ಟೆಂಬರ್ 08: ಮುಡಾ ಹಗರಣ ಹಾಗೂ ವಾಲ್ಮೀಕಿ ನಿಗಮ ಹಗರಣ ಇಡೀ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದೆ. ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಅವರು ಇರುವಾಗಲೇ ಸಿಎಂ ಸ್ಥಾನಕ್ಕಾಗಿ ಕೈ ನಾಯಕರು ತೀವ್ರ ಪೈಪೋಟಿಯನ್ನ ನಡೆಸಿದ್ದು, ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದು ಅಭಿಮಾನ ಆರಂಭಿಸಿದ್ದಾರೆ.
ಬೆಳಗಾವಿಯಲ್ಲಿ ಸತೀಶ್ ಜಾರಕಿಹೋಳಿ ಅವರ ಅಭಿಮಾನಿಗಳಿಂದ ಅಭಿಯಾನ ಶುರುವಾಗಿದ್ದು, ಸೋಶಿಯಲ್ ಮೀಡಿಯಾದ ಮಾತ್ರ ಅಲ್ಲ. ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಸ್ಥಾನ ಲಭಿಸಲಿ ಎಂದು ಪತ್ರಿಕೆಗೆ ಜಾಹೀರಾತುಗಳನ್ನ ನೀಡಿದ್ದಾರೆ.
ಕರ್ನಾಟಕದ ಪ್ರಮುಖ ದಿನಪತ್ರಿಕೆಯೊಂದಕ್ಕೆ ಅಭಿಮಾನಿಯೊಬ್ಬರು ಜಾಹೀರಾತು ನೀಡಲಾಗಿದ್ದು, ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎನ್ನುವ ಜಾಹೀರಾತಿನಲ್ಲಿ ಬಿಜೆಪಿ ನಾಯಕರ ಪೋಟೋ ಪ್ರಕಟವಾಗಿದೆ.
ಇನ್ನೂ ಪ್ರಧಾನಿ ನರೇಂದ್ರ ಮೋದಿ, ರಮೇಶ್ ಜಾರಕಿಹೊಳಿ ಪೋಟೋ ಜೊತೆ ಸತೀಶ ಜಾರಕಿಹೊಳಿ ಪೋಟೋ ಪ್ರಕಟವಾಗಿದೆ.