Breaking News

ಗ್ರಾಮ ಪಂಚಾಯತಿ ಆಸ್ತಿ ತೆರಿಗೆ’ ಪಾವತಿ ‘UPI ಆಯಪ್’ ಮೂಲಕ ಪಾವತಿಸಿ

Spread the love

ಬೆಂಗಳೂರು: ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆಸ್ತಿ ತೆರಿಗೆ ಪಾವತಿಗಾಗಿ ಈ ಮೊದಲು ಬಾಪೂಜಿ ಸೇವಾ ಕೇಂದ್ರಗಳಿಗೆ ತೆರಳಿ ಕ್ಯೂ ನಿಂತು ಪೇ ಮಾಡಬೇಕಿತ್ತು. ಆದರೇ ಈಗ ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆ ಪಾವತಿ ಮತ್ತಷ್ಟು ಸರಳವಾಗಿದೆ. ನೀವು ಕುಳಿತಲ್ಲೇ ಆನ್ ಲೈನ್ ಮೂಲಕ ಪಾವತಿಸಬಹುದಾಗಿದೆ.

 

ಹೌದು.. ಸಾರ್ವಜನಿಕರು ಇನ್ಮುಂದೆ ತಮ್ಮ ಮೊಬೈಲ್ ನಲ್ಲೇ ಪೋನ್ ಪೇ, ಗೂಗಲ್ ಪೇ, ಬೀಮ್ ಅಪ್ಲಿಕೇಷನ್, ಪೇಟಿಎಂ ಸೇರಿದಂತೆ ಇತರೆ ಮೊಬೈಲ್ ಅಪ್ಲಿಕೇಷನ್ ಮೂಲಕ ಆಸ್ತಿ ತೆರಿಗೆಯನ್ನು ಪಾವತಿಸಬಹುದಾಗಿದೆ.

ಬಹುತೇಕರು ಯುಪಿಐ ಪಾವತಿ ಬಳಕೆಯನ್ನು ಮಾಡುತ್ತಲೇ ಇರ್ತೀರಿ. ನೀವು ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆ ಪಾವತಿಗಾಗಿ ಈಗ ಕಷ್ಟ ಪಡುವ ಅಗತ್ಯವಿಲ್ಲ. ಕ್ಯೂ ನಿಂತು ಆಸ್ತಿ ತೆರಿಗೆ ಪಾವತಿಸೋ ಅಗತ್ಯನೂ ಇಲ್ಲ. ಕೇವಲ ಆನ್ ಲೈನ್ ನಲ್ಲೇ ನಿಮ್ಮ ಆಸ್ತಿ ತೆರಿಗೆಯ ನಂಬರ್ ದಾಖಲಿಸಿ, ಎಲೆಕ್ಟ್ರಿಕ್ ಸಿಟಿ ಬಿಲ್ ಪಾವತಿ ಮಾಡಿದಂತೆಯೇ ಮಾಡಬಹುದಾಗಿದೆ.

ಈ ವಿಧಾನ ಅನುಸರಿಸಿ, ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆ ಪಾವತಿಸಿ

  • ನೀವು ಇದಕ್ಕಾಗಿ ಗೂಗಲ್ ಪೇ, ಪೋನ್ ಪೇ, ಪೇಟಿಎಂ ಸೇರಿದಂತೆ ಇತರೆ ಆಪ್ ಡೌನ್ ಲೋಡ್ ಮಾಡ್ಕೊಳ್ಳಿ.
  • ಪ್ರತಿಯೊಂದು ಪಾವತಿ ಆಪ್ ಗಳಲ್ಲಿ ಬಿಲ್ ಪೇ ಎನ್ನುವಂತ ಆಫ್ಷನ್ ಇರುತ್ತದೆ. ಅಲ್ಲಿಗೆ ಭೇಟಿ ನೀಡಬೇಕು.
  • ಬಿಲ್ ಪೇ ಗೆ ತೆರಳಿದ ನಂತ್ರ, ನೀವು ಬಾಪೂಜಿ ಸೇವಾ ಕೇಂದ್ರ ಎಂಬುದಾಗಿ ಟೈಪ್ ಮಾಡಿದ್ರೇ, ಅದು ಲಭ್ಯವಾಗಲಿದೆ.
  • ಬಾಪೂಜಿ ಸೇವಾ ಕೇಂದ್ರದ ಆಯ್ಕೆಯಲ್ಲಿ Bapuji seva kendra(RDPR) ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಿ.
  • ಈ ಬಳಿಕ ನೀವು ನಿಮ್ಮ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನೀಡಿರುವಂತ Property/Plot Number ಕಾಲಂ ನಲ್ಲಿ ನಿಮ್ಮ ಆಸ್ತಿ ಸಂಖ್ಯೆಯನ್ನು ನಮೂದಿಸಿ.
  • ನಿಮ್ಮ ಆಸ್ತಿಯ ಸಂಖ್ಯೆಯನ್ನು ನಮೂದಿಸಿದ ಬಳಿಕ, ಅದರ ಕೆಳಗಿನ ಕಂಟಿನ್ಯೂ ಬಟನ್ ಕ್ಲಿಕ್ ಮಾಡಿ. ನೀವು ಪಾವತಿಸಬೇಕಿರುವಂತ ಆಸ್ತಿ ತೆರಿಗೆ ಹಣವನ್ನು ತೋರಿಸಲಿದೆ.
  • ಇದಾದ ಬಳಿಕ ನೀವು ಪೇ ಎನ್ನುವಲ್ಲಿ ಕ್ಲಿಕ್ ಮಾಡಿದ್ರೇ, ನಿಮ್ಮ UPI ನಂಬರ್ ಕೇಳಲಿದೆ. ಅದನ್ನು ನಮೂದಿಸಿದ್ರೇ ನಿಮ್ಮ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆಸ್ತಿ ತೆರಿಗೆ ಪಾವತಿಯಾಗಲಿದೆ.

ಇದು ಆಪ್ ಮೂಲಕ ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆ ಪಾವತಿ ವಿಧಾನವಾದ್ರೇ, ನೀವು ನೇರವಾಗಿhttps://bsk.karnataka.gov.in/BSK/csLogin/loginPageಗೆಭೇಟಿ ನೀಡಿ, ಅಲ್ಲಿ ಕೇಳುವಂತ ನಿಮ್ಮ ನಂಬರ್, ಗುರುತಿನ ವಿವರದ ಮಾಹಿತಿಯನ್ನು ನಮೂದಿಸಿಯೂ ವೆಬ್ ಸೈಟ್ ಮೂಲಕ ಆನ್ ಲೈನ್ ನಲ್ಲಿ ಆಸ್ತಿ ತೆರಿಗೆ ಪಾವತಿಸಬಹುದಾಗಿದೆ. ನಿಮ್ಮ ತಲೆಯಲ್ಲಿ ಯಾವುದಾದರೂ ಡೌಟ್ಸ್ ಓಡುತ್ತಿದ್ದರೇ,https://bsk.karnataka.gov.in/BSK/cs/loadHelpಇಲ್ಲಿಗೆ ಭೇಟಿ ನೀಡಿ. ಅದಕ್ಕೆ ಉತ್ತರವೂ ಸಿಗಲಿದೆ.

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಸರ್ಕಾರದ ಬಾಪೂಜಿ ಸೇವಾ ಕೇಂದ್ರದ ಅಧಿಕೃತ ಜಾಲತಾಣhttps://bsk.karnataka.gov.in/BSK/csLogin/loginPageಭೇಟಿ ನೀಡಿ ಪಡೆಯಬಹುದಾಗಿದೆ


Spread the love

About Laxminews 24x7

Check Also

2 ವರ್ಷಗಳಿಂದ ಆರಂಭವಾಗದ ಶುದ್ಧ ನೀರಿನ ಘಟಕಗಳು

Spread the loveಹಾವೇರಿ: ನಗರದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂದು ಶಾಸಕರ ಅನುದಾನದಲ್ಲಿ ಆರು ಶುದ್ಧ ಕುಡಿಯುವ ನೀರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ