ಸವದತ್ತಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಸವದತ್ತಿ ತಾಲ್ಲೂಕಿನ ಹಿಟಣಗ್ಗಿ ಗ್ರಾಮದ ಶ್ರೀ ಬಸವೇಶ್ವರ ದೇವರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು.
ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಮಾರ್ಗದರ್ಶಕರಾದ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನ ಸಂತರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ದಾನಗೌಡ ಗೌಡರ, ಸುರೇಶ್ ಅಸುಂಡಿ, ಈಶ್ವರ ತಳವಾರ, ಈರಬಸಯ್ಯ ಎನಗಿಮಠ, ಈರಪ್ಪಾ ಹೊಂಬಾಳ, ಮಂಜುನಾಥ ಎನಗಿಮಠ, ರುದ್ರಯ್ಯ ಹಿರೇಮಠ, ದುಂಡಯ್ಯ ಹಿರೇಮಠ, ಮಡಿವಾಳ ಪೂಜೇರಿ, ಶಂಕರ ಪೂಜಾರಿ, ಉದಪ್ಪಾ ಪೂಜೇರಿ, ಮಲ್ಲೇಶ ಮಾದರ, ದಿಲಾರಸಾಬ್ ಅಗಸಿಮನಿ, ಸೊಮನಗೌಡ ಗೌಡರ, ಶಂಕರಪ್ಪಾ ಮುತಿಕೊಪ್ಪ, ಮಹಾಂತೇಶ ದೆವಗಾಂವಿ, ಬಾಬು ತಳವಾರ ಹಾಗೂ ಅನೇಕ ಹಿರಿಯರು, ಮುಖಂಡರು, ಯುವಕರು ಉಪಸ್ಥಿತರಿದ್ದರು.