Breaking News

ಸೆನ್ಸೆಕ್ಸ್ 1 ಸಾವಿರ ಅಂಕ ಕುಸಿತ, ಹೂಡಿಕೆದಾರರ 5 ಲಕ್ಷ ಕೋಟಿ ರೂ ನಷ್ಟ!

Spread the love

ಮುಂಬೈ: ಭಾರತೀಯ ಷೇರು ಮಾರುಕಟ್ಟೆ ವಾರದ ಕೊನೆಯ ದಿನವಾದ ಶುಕ್ರವಾರ ಒಂದೇ ದಿನ ಭಾರಿ ಕುಸಿತ ಕಂಡಿದ್ದು, ಸೆನ್ಸೆಕ್ಸ್ 1 ಸಾವಿರಕ್ಕೂ ಅಧಿಕ ಅಂಕಗಳ ನಷ್ಟ ಅನುಭವಸಿದ್ದು ಮಾತ್ರವಲ್ಲದೇ ಹೂಡಿಕೆದಾರರ 5 ಲಕ್ಷ ಕೋಟಿ ರೂ ನಷ್ಟವಾಗಿದೆ.

ಇಂದು ದಿನದ ವಹಿವಾಟು ಅಂತ್ಯಕ್ಕೆ ಸೆನ್ಸೆಕ್ಸೆ ಬರೊಬ್ಬರಿ 1, 017 ಅಂಕಗಳ ಕುಸಿತ ಕಂಡಿದ್ದು ಆ ಮೂಲಕ ಬರೊಬ್ಬರಿ ಶೇ.1.24ರಷ್ಟು ಕುಸಿತದೊಂದಿಗೆ 81,183 ಅಂಕಗಳಿಗೆ ಕುಸಿದಿದೆ.

ಅಂತೆಯೇ ನಿಫ್ಟಿ ಕೂಡ ಶೇ.1.17ರಷ್ಟು ಅಂದರೆ 293 ಅಂಕಗಳಷ್ಟು ಕುಸಿತಗೊಂಡು 24,852 ಅಂಕಗಳಿಗೆ ಕುಸಿದಿದೆ.

ಅಮೆರಿಕದ ಫೆಡರಲ್ ರಿಸರ್ವ್‌ನ ಬಡ್ಡಿದರ ಕಡಿತದ ಮೇಲೆ ಪ್ರಭಾವ ಬೀರಬಹುದಾದ ನಿರ್ಣಾಯಕ ಅಮೆರಿಕ ಉದ್ಯೋಗಗಳ ವರದಿಯ ವಿಚಾರವಾಗಿ ಇಂದು ಹೂಡಿಕೆದಾರರು ವಹಿವಾಟು ನಡೆಸಲು ತೋರಿದ ಅತೀವ ಜಾಗರೂಕತೆ ಇಂದಿನ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ. ಎಲ್ಲ ವಲಯಗಳಲ್ಲೂ ಮಾರಾಟದ ಒತ್ತಡ ಕಂಡುಬಂದಿದೆ.

ಹೂಡಿಕೆದಾರರ 5 ಲಕ್ಷ ಕೋಟಿ ರೂ ನಷ್ಟ

ಇದೇ ವೇಳೆ ಇಂದಿನ ಮಾರುಕಟ್ಟೆ ಕುಸಿತದ ಪರಿಣಾಮವಾಗಿ ಇಂದು ಹೂಡಿಕೆದಾರರ ಸುಮಾರು 5.2 ಲಕ್ಷ ಕೋಟಿ ರೂ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇಂದಿನ ವಹಿವಾಟಿನ ಅಂತ್ಯಕ್ಕೆ ಪಟ್ಟಿ ಮಾಡಲಾದ ಸಂಸ್ಥೆಗಳ ಹೂಡಿಕೆ 460.46 ಲಕ್ಷ ಕೋಟಿ ರೂಗೆ ಕುಸಿದಿದೆ.


Spread the love

About Laxminews 24x7

Check Also

ಬಂಗಾರ ಪ್ರಿಯರಿಗೆ ಗುಡ್‌ ನ್ಯೂಸ್‌ – 10 ಗ್ರಾಂ ಚಿನ್ನದ ಬೆಲೆ 2,900 ರೂ. ಇಳಿಕೆ

Spread the loveಬೆಂಗಳೂರು: ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಸಿ ನಡುವೆಯೂ ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಏರುಗತಿಯಲ್ಲಿ ಸಾಗುತ್ತಿದ್ದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ