Breaking News

ಈಜು ರಿಲೆ: ದಾಖಲೆ ಬರೆದ ತಾಯಿ-ಮಗ

Spread the love

ಬೆಳಗಾವಿ: ಇಲ್ಲಿನ ಸ್ವಿಮ್ಮರ್ಸ್ ಕ್ಲಬ್ ಮತ್ತು ಅಕ್ವೇರಿಯಸ್ ಸ್ವಿಮ್ ಕ್ಲಬ್‌ನ ಈಜುಪಟುಗಳಾದ ಜ್ಯೋತಿ ಕೋರಿ (ಹೊಸಟ್ಟಿ) ಹಾಗೂ ಅವರ ಪುತ್ರ ವಿಹಾನ್‌ ಜತೆಯಾಗಿ, ಕೆಎಲ್‌ಇ ಸಂಸ್ಥೆಯ ಸುವರ್ಣ ಜೆಎನ್‌ಎಂಸಿ ಈಜುಕೊಳದಲ್ಲಿ ಗುರುವಾರ ನಡೆದ ‘ನಾನ್‌ಸ್ಟಾಪ್‌ ಸ್ವಿಮ್ಮಿಂಗ್‌ ರಿಲೆ’ಯಲ್ಲಿ 12 ಗಂಟೆ, 22 ನಿಮಿಷ ಈಜಿ ಇಂಡಿಯಾ ಅಂಡ್‌ ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಮತ್ತು ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಸೇರಿದರು.

 

44 ವರ್ಷ ವಯಸ್ಸಿನ ಜ್ಯೋತಿ ಮತ್ತು 12ರ ಪ್ರಾಯದ ವಿಹಾನ್‌ ನಸುಕಿನ 5.08ಕ್ಕೆ ಈಜಲು ಆರಂಭಿಸಿದರು. ಸಂಜೆ 5.30ಕ್ಕೆ ಮುಗಿಸಿದರು. ವಿಹಾನ್ 18 ಕಿ.ಮೀ ಹಾಗೂ ಜ್ಯೋತಿ 12 ಕಿ.ಮೀ. ಈಜಿದರು. ಇಬ್ಬರೂ ರಿಲೆ ಮಾದರಿಯಲ್ಲಿ ತಲಾ ಒಂದೊಂದು ಗಂಟೆ ಈಜಿ ದಾಖಲೆ ಮೆರೆದರು.

‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಮತ್ತು ‘ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌’ನ ತೀರ್ಪುಗಾರ್ತಿ ರೇಖಾ ಸಿಂಗ್ ಈ ದಾಖಲೆಯನ್ನು ಖಚಿತಪಡಿಸಿದರು.

‘ತಾಯಿ ಮತ್ತು ಮಗ ರಿಲೆ ಮಾದರಿಯಲ್ಲಿ ಸತತ 12 ಗಂಟೆ, 22 ನಿಮಿಷ ಈಜಿ ದಾಖಲೆ ಮಾಡಿದ್ದು ಇದೇ ಮೊದಲು. ಅವರಿಬ್ಬರೂ ಯಾರ ದಾಖಲೆ ಮುರಿಯಲು ಈಜಲಿಲ್ಲ. ಬದಲಿಗೆ, ಚೊಚ್ಚಲ ದಾಖಲೆ ಮಾಡಿದ್ದಾರೆ’ ಎಂದರು.

ಬೆಳಗಾವಿ ತಾಲ್ಲೂಕಿನ ಕಡೋಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಯೋಗಾಲಯ ತಾಂತ್ರಿಕ ಅಧಿಕಾರಿಯಾದ ಜ್ಯೋತಿ, 38ನೇ ವಯಸ್ಸಿನಲ್ಲಿ ಈಜಲು ಆರಂಭಿಸಿದರು. ರಾಷ್ಟ್ರಮಟ್ಟದ 7 ಟೂರ್ನಿಗಳಲ್ಲಿ 26 ಪದಕ, ರಾಜ್ಯಮಟ್ಟದ ಟೂರ್ನಿಗಳಲ್ಲಿ 54 ಪದಕ ಹಾಗೂ ಶ್ರೀಲಂಕಾದಲ್ಲಿ ನಡೆದ ಆಹ್ವಾನಿತ ಈಜು ಟೂರ್ನಿಯಲ್ಲಿ 6 ಪದಕ ಗೆದ್ದಿದ್ದಾರೆ.

ಸೇಂಟ್‌ ಝೇವಿಯರ್‌ ಪ್ರೌಢಶಾಲೆಯಲ್ಲಿ ಓದುತ್ತಿರುವ ವಿಹಾನ್‌ ರಾಜ್ಯ ಹಾಗೂ ಜಿಲ್ಲಾಮಟ್ಟದ ಈಜು ಟೂರ್ನಿಗಳಲ್ಲಿ 22 ಪದಕ ಗಳಿಸಿದ್ದಾರೆ.

 ಬೆಳಗಾವಿಯ ಸುವರ್ಣ ಜೆಎನ್‌ಎಂಸಿ ಈಜುಕೊಳದಲ್ಲಿ ಜ್ಯೋತಿ ಕೋರಿ ಅವರು ಗುರುವಾರ ಈಜಿದ ಪರಿ ಬೆಳಗಾವಿಯ ಸುವರ್ಣ ಜೆಎನ್‌ಎಂಸಿ ಈಜುಕೊಳದಲ್ಲಿ ಗುರುವಾರ ವಿಹಾನ್‌ ಕೋರಿ ಈಜಿದ ಪರಿ


Spread the love

About Laxminews 24x7

Check Also

ಅಡಿಕೆ ಸಾಗಿಸುತ್ತಿದ್ದ VRL ಲಾರಿ ತೋಟಕ್ಕೆ ಉರುಳಿ ಸಂಪೂರ್ಣ ಜಖಂ!

Spread the loveಶಿರಸಿ:ಶಿರಸಿಯಿಂದ ಹುಬ್ಬಳ್ಳಿಗೆ ಅಡಿಕೆ ಸಾಗಿಸುತ್ತಿದ್ದ VRL ಸಂಸ್ಥೆಗೆ ಸೇರಿದ ಲಾರಿಯೊಂದು ಚಾಲಕನ ಅಜಾಗರೂಕತೆಯಿಂದ ನಿಯಂತ್ರಣ ಕಳೆದುಕೊಂಡು ರಸ್ತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ