Breaking News

ಅಣ್ಣಾ ನಾನು ನಿನ್ನ ಪಕ್ಕಾ ಅಭಿಮಾನಿ, ತಪ್ಪಾಯ್ತು ಕ್ಷಮಿಸಿ ಬಿಡು’ ಎಂದು ಪ್ರಾಣ ಭಿಕ್ಷೆ ಬೇಡಿದರೂ ಕರುಣೆ ತೋರದ ದರ್ಶನ್ ಗ್ಯಾಂಗ್

Spread the love

ಅಣ್ಣಾ ನಾನು ನಿನ್ನ ಪಕ್ಕಾ ಅಭಿಮಾನಿ, ತಪ್ಪಾಯ್ತು ಕ್ಷಮಿಸಿ ಬಿಡು’ ಎಂದು ಪ್ರಾಣ ಭಿಕ್ಷೆ ಬೇಡಿದರೂ ಕರುಣೆ ತೋರದ ದರ್ಶನ್ ಗ್ಯಾಂಗ್

ಬೆಂಗಳೂರು: ಅಣ್ಣಾ ನಾನು ನಿನ್ನ ಪಕ್ಕಾ ಅಭಿಮಾನಿ, ನನ್ನಿಂದ ದೊಡ್ಡ ತಪ್ಪಾಗಿದೆ. ದಯಮಾಡಿ ಬಿಟ್ಟುಬಿಡಿ. ಇನ್ನು ಮುಂದೆ ಇಂತಹ ಕೆಟ್ಟ ಕೆಲಸ ಮಾಡುವುದಿಲ್ಲ ಎಂದು ಚಿತ್ರದುರ್ಗದ ರೇಣುಕಾಸ್ವಾಮಿ ಸಾವಿಗೆ ಮೊದಲು ಪರಿಪರಿಯಾಗಿ ಪ್ರಾಣ ಭಿಕ್ಷೆ ಬೇಡಿದರೂ ನಟ ದರ್ಶನ್ ಮತ್ತು ಅವರ ಸಹಚರರು ನಿರ್ದಯವಾಗಿ ಹೊಡೆದು ಕೊಂದು ಹಾಕಿದ್ದಾರೆ.

 

ರೇಣುಕಾಸ್ವಾಮಿಯ ಸಾವಿನ ಕೊನೆಯ ಕ್ಷಣಗಳು ದರ್ಶನ್ ಮತ್ತು ಸಹಚರರ ಕ್ರೌರ್ಯವನ್ನು ಸಾರಿ ಹೇಳುವ ಫೋಟೋಗಳನ್ನು ಪೊಲೀಸರು ಆರೋಪ ಪಟ್ಟಿಗೆ ಸಾಕ್ಷಿಯಾಗಿ ಸಲ್ಲಿಸಿದ್ದಾರೆ. ಪಟ್ಟಣಗೆರೆ ಶೆಡ್ ಆವರಣದಲ್ಲಿ ನಿಲ್ಲಿಸಿದ್ದ ಎರಡು ಲಾರಿಗಳ ಮಧ್ಯೆ ರೇಣುಕಾಸ್ವಾಮಿ ಕುಕ್ಕರಗಾಲಿನಲ್ಲಿ ಕುಳಿತುಕೊಂಡು ದೈನೆಸಿ ಸ್ಥಿತಿಯಲ್ಲಿ ಬೇಡಿಕೊಂಡಿದ್ದಾರೆ. ಆತನ ಕೋರಿಕೆಗೆ ಕರಗದ ಪವಿತ್ರಾ ಗೌಡ, ಯಾವುದೇ ಕಾರಣಕ್ಕೂ ಅವನನ್ನು ಬಿಡಬೇಡಿ, ಕಿಲ್ ಹಿಮ್ ಎಂದು ಆರೋಪಿಗಳನ್ನು ಪ್ರಚೋದಿಸಿದ್ದರು. ರೇಣುಕಾ ಸ್ವಾಮಿಯ ಕೊನೆಯ ಕ್ಷಣದ ಫೋಟೋಗಳನ್ನು ಪ್ರಕರಣದ ಆರೋಪಿ ಪವನ್ ಮೊಬೈಲ್ ನಲ್ಲಿ ಕ್ಲಿಕ್ಕಿಸಿದ್ದ. ನಂತರ ಅವುಗಳನ್ನು ಡಿಲಿಟ್ ಮಾಡಿ ಸಾಕ್ಷ್ಯ ನಾಶಪಡಿಸಿದ್ದ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.


Spread the love

About Laxminews 24x7

Check Also

ಆನ್‌ಲೈನ್ ಗೇಮಿಂಗ್ ಪ್ರಚಾರ-ನಿಯಂತ್ರಣ ಕಾಯಿದೆ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ: ಆ.30ಕ್ಕೆ ವಿಚಾರಣೆ

Spread the love ಬೆಂಗಳೂರು: ಹಣವನ್ನು ಪಣಕ್ಕಿಟ್ಟು ಆಡುವಂತಹ ಆನ್‌ಲೈನ್​ ಗೇಮ್​ಗಳಿಗೆ ನಿಷೇಧ ಹೇರುವುದಕ್ಕೆ ಅವಕಾಶ ಕಲ್ಪಿಸುವ ಆನ್‌ಲೈನ್ ಗೇಮಿಂಗ್ ಪ್ರಚಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ