ಮುಂಬಯಿ: ರಿಷಬ್ ಶೆಟ್ಟಿ (Rishab Shetty) ಅವರ ʼಕಾಂತಾರʼ (Kantara) ಸಿನಿಮಾ ಬಂದ ಬಳಿಕ ತುಳುನಾಡಿನ ದೈವಗಳ ಮೇಲಿನ ನಂಬಿಕೆ ಎಲ್ಲೆಡೆ ಹಬ್ಬಿದೆ. ಆದರೆ ʼಕಾಂತಾರʼ ರಿಲೀಸ್ ಬಳಿಕ ದೈವಗಳ ವೇಷ -ಭೂಷಣ ತೊಟ್ಟು ದೈವಗಳ ಆರಾಧಕರ ಮನಸ್ಸಿಗೆ ಧಕ್ಕೆ ಆಗುವ ವಿಚಾರಗಳು ಕೂಡ ನಡೆದಿದೆ.
ಕರಾವಳಿಯಲ್ಲಿ ದೈವಗಳ ಆರಾಧನೆ ಇತ್ತೀಚೆಗಿನ ವರ್ಷಗಳಲ್ಲಿ ಆಚರಿಸಿಕೊಂಡು ಬಂದಿರುವಂಥದ್ದಲ್ಲ, ಸಾವಿರಾರು ವರ್ಷಗಳಿಂದಲೂ ದೈವ -ದೇವರುಗಳ ಚಾಕರಿಯನ್ನು ಮಾಡುತ್ತಾ ಬಂದಿರುವ ಅನೇಕ ಕುಟುಂಬಗಳು ನಮ್ಮಲಿದೆ.
ದೈವಗಳ ವಿಚಾರವನ್ನಿಟ್ಟುಕೊಂಡು ಹಾಸ್ಯಾಸ್ಪದವಾಗಿ ವರ್ತಿಸುವವರ ವಿರುದ್ಧ ತುಳುನಾಡಿಗರು ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಅನೇಕ ಬಾರಿ ಹಲವರನ್ನು ತರಾಟೆಗೆ ತೆಗೆದುಕೊಂಡದ್ದೂ ಇದೆ.
ಮುಂಬಯಿನಲ್ಲಿನ ಗಣೇಶ್ ಚತುರ್ಥಿ ಹಬ್ಬಕ್ಕಾಗಿ ತಯಾರಾದ ಪಂಜುರ್ಲಿ ದೈವದ ಅವತಾರವುಳ್ಳ ಗಣೇಶನ ವಿಗ್ರಹವೊಂದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.