Breaking News

ನಮಗೆ ನೀರು ಕೊಡದಿದ್ರೆ ಪೈಪ್‍ಲೈನ್ ಒಡೆದು ಹಾಕ್ತೀನಿ: ಶಿವಲಿಂಗೇಗೌಡ

Spread the love

ಹಾಸನ: ನಮಗೆ ನೀರು ಕೊಡದೆ ಪೈಪ್ ಲೈನ್ ತೆಗೆದುಕೊಂಡು ಹೋದರೆ ಅದನ್ನು ಒಡೆದು ಹಾಕಿಸ್ತೀನಿ. ಏನಾಗುತ್ತೋ ಆಗಲಿ ಎಂದು ಶಾಸಕ ಶಿವಲಿಂಗೇಗೌಡ ಕೆಡಿಪಿ ಸಭೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಹಾಸನದ ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ಸಚಿವ ಗೋಪಾಲಯ್ಯ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆಯುತ್ತಿತ್ತು. ಈ ವೇಳೆ ಮಾತನಾಡಿದ ಶಾಸಕ ಶಿವಲಿಂಗೇಗೌಡ ಕೃಷ್ಣಾ ಬೇಸಿನ್ ನಲ್ಲಿ ನಮಗೂ ಹಕ್ಕಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಎರಡು ಹೋಬಳಿಗಳು ಕೃಷ್ಣಾ ಬೇಸಿನ್‍ಗೆ ಸೇರಿದೆ. ನಮಗೆ ನೀರು ಕೊಡ್ತೀವಿ ಅಂತಾ ಕ್ಯಾಬಿನೆಟ್ ನಲ್ಲಿ ಹೇಳಿದ್ದರು. ಆ ಪ್ರಕಾರ ನಮ್ ಅರಸೀಕೆರೆ ತಾಲೂಕಿನ 20 ಕೆರೆಗಳಿಗೆ ನೀರು ಹರಿಸಬೇಕು. ಆದರೆ ಈಗ ಒಂದೇ ಒಂದು ಕಟ್ಟೆ ಸೇರಿಸಿದ್ದಾರೆ. ನಮ್ ತಾಲೂಕಿನಲ್ಲಿ ಪೈಪ್‍ಲೈನ್ ಹಾಕಿ ಚಿಕ್ಕಮಗಳೂರಿಗೆ ನೀರು ತೆಗೆದುಕೊಂಡು ಹೋಗುತ್ತಿದ್ದಾರೆ. ನೀರು ಕೊಡದೆ ಇದ್ದರೆ ನಾನು ಪೈಪ್ ಹಾಕೋಕೆ ಬಿಡ್ತೀನಾ, ನೋಡೋಣ ಎಲ್ಲಾ ಪೈಪ್ ಗಳನ್ನು ಒಡೆದು ಹಾಕಿಸ್ತೀನಿ ಎಂದ ಶಿವಲಿಂಗೇಗೌಡ ಕಿಡಿಕಾರಿದ್ದಾರೆ.


Spread the love

About Laxminews 24x7

Check Also

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ

Spread the loveಹಾಸನ (ಮಾ.19): ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡರ ಕುಟುಂಬದಲ್ಲಿ ದುಃಖದ ಛಾಯೆ ಆವರಿಸಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ