ಬೆಂಗಳೂರು: ಮುಡಾ ನಿವೇಶನ ಹಂಚಿಕೆಯಲ್ಲಿನ (Muda Scam) ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದ ರಾಜ್ಯಪಾಲರ (Governor) ಆದೇಶವನ್ನು ವಜಾಗೊಳಿಸುವಂತೆ ಮನವಿ ಕೋರಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ (High Court) ಮೆಟ್ಟಿಲೇರಿದ್ದರು.
ಈ ಪ್ರಕರಣದ ವಿಚಾರಣೆ ಸೋಮವಾರ ನ್ಯಾಯಮೂರ್ತಿ ನಾಗಪ್ರಸನ್ನ ಏಕಸದಸ್ಯ ಪೀಠದಲ್ಲಿ ನಡೆದಿತ್ತು. ದೂರುದಾರ ಸ್ನೇಹಮಯಿ ಕೃಷ್ಣ ಪರ ವಕೀಲರ ವಾದ ಆಲಿಸಿದ ನ್ಯಾಯಾದೀಶರು ವಿಚಾರಣೆಯನ್ನ ಮುಂದಿನ ಸೋಮವಾರ ಅಂದರೆ ಸೆಪ್ಟೆಂಬರ್ 9ಕ್ಕೆ ಮುಂದೂಡಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯರಿಗೆ ಇನ್ನೂ 8 ದಿನ ರಿಲೀಫ್ ಸಿಕ್ಕಂತಾಗಿದೆ.
ಈ ಪ್ರಕರಣದ ವಿಚಾರಣೆ ಸೋಮವಾರ ಬೆಳಗ್ಗೆ 2:30ರಿಂದ ಪುನಾರಂಭವಾಗಲಿದೆ. ಅಲ್ಲಿಯ ತನಕ ಸಿದ್ದರಾಮಯ್ಯ ವಿರುದ್ಧ ಯಾವುದೇ ಕ್ರಮಕೈಗೊಳ್ಳದಂತೆ ಸೂಚಿಸಲಾಗಿದೆ. ಸೆಪ್ಟೆಂಬರ್ 9ರಂದು ಎಜಿ ವಾದ ಮಂಡಿಸಲಿದ್ದಾರೆ. ಸೆಪ್ಟೆಂಬರ್ 12ರಂದು ಸಿದ್ದರಾಮಯ್ಯ ಪರ ಅಭಿಷೇಕ್ ಮನು ಸಿಂಘ್ವಿ ಪ್ರತ್ಯುತ್ತರ ನೀಡಲಿದ್ದಾರೆ.
ಕಳೆದ ವಿಚಾರಣೆಯಲ್ಲಿ ರಾಜ್ಯಪಾಲರ ಪರವಾಗಿ ವಕೀಲ ತುಷಾರ ಮೆಹ್ತಾ , ಸ್ನೇಹಮಯಿಕೃಷ್ಣ ಪರ ಹಿರಿಯ ವಕೀಲ ಮಣೀಂಧರ್ ಸಿಂಗ್ ಹಾಗೂ ಪ್ರದೀಪ್ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ, ಅಬ್ರಹಾಂ ಪರ ವಕೀಲ ರಂಗನಾಥ ರೆಡ್ಡಿ ವಾದ ಮಂಡಿಸಿದ್ದರು. ಸುದೀರ್ಘ ವಾದ ಆಲಿಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಸೋಮವಾರ ಮಧ್ಯಾಹ್ನಕ್ಕೆ ಮುಂದೂಡಿತ್ತು. ಸೋಮವಾರ ಮತ್ತೆ ಪ್ರತಿವಾದಿಗಳ ಪರ ಕೆಲ ವಕೀಲರಿಂದ ವಾದ ಮಂಡನೆ ಮಾಡಲಾಯಿತು. ಸಿಎಂ ಸಿದ್ದರಾಮಯ್ಯ ಪರ ವಕೀಲ ರವಿವರ್ಮ ಕುಮಾರ್ ಆಗಮಿಸಿದ್ದರು. ದೂರದಾರ ಸ್ನೇಹಮಯಿಕೃಷ್ಣ ಪರ ಹಿರಿಯ ವಕೀಲ ಕೆ.ಜಿ ರಾಘವನ್ ವಾದ ಮಾಡಿದರು. 17A ಸಂಬಂಧಿಸಿದಂತೆ ಅನುಮತಿ ಬೇಕೋ, ಬೇಡವೋ ಎಂಬುದರ ಬಗ್ಗೆ ಅವರು ವಾದ ಮಂಡನೆ ಮಾಡಿದರು.
ಭ್ರಷ್ಟಾಚಾರ ತಡೆ ಕಾಯ್ದೆ ಉಲ್ಲೇಖಿಸಿ ವಾದ
ದೂರುದಾರರಪರವಾಗಿ ವಾದ ಮಂಡಿಸಿದ ರಾಘವನ್ ಅವರು, ಸಿದ್ಧರಾಮಯ್ಯ ಪರ ವಕೀಲರು ಪಿ.ಸಿ.ಕಾಯ್ದೆ 17 ಎ ಅಡಿ ಪೂರ್ವಾನುಮತಿಬೇಕು. 17 ಎ ಮಾನದಂಡ ಪಾಲನೆಯಾಗದಿದ್ದರೂ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆ 17 ಎ ಬಗ್ಗೆ ನಾನು ವಾದಿಸಿದ್ದೆ. ಇದೊಂದೋ ಅಂಶದ ಆಧಾರದಲ್ಲಿ ರಾಜ್ಯಪಾಲರ ಆದೇಶ ರದ್ದುಪಡಿಸಬೇಕು. ಪೊಲೀಸ್ ಅಧಿಕಾರಿ ಅನುಮತಿ ಪಡೆಯದೇ ತನಿಖೆ ಮಾಡುವಂತಿಲ್ಲ. ಸಾರ್ವಜನಿಕ ಸೇವಕನ ಶಿಫಾರಸು, ನಿರ್ಧಾರಗಳ ಕುರಿತಾದ ತನಿಖೆ ಇರಬೇಕು. ಈ ಎರಡೂ ಅಂಶಗಳನ್ನು ರಾಜ್ಯಪಾಲರು ಪಾಲಿಸಿಲ್ಲ ಎಂದು ವಾದಿಸಿದ್ದರು.