Breaking News

ಮಹಿಳೆಯ ಹತ್ಯೆ ಪ್ರಕರಣ. 48 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು

Spread the love

ವಿಜಯನಗರ ( ಕಾನಾಹೊಸಹಳ್ಳಿ) : ನಿರ್ಜನ ಪ್ರದೇಶದಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ ಪ್ರಕರಣವನ್ನು 48 ಗಂಟೆಯಲ್ಲಿ ಪೊಲೀಸರು ಭೇದಿಸಿದ್ದು ಆರೋಪಿಯನ್ನು ಬಂಧಿಸಿದ್ದಾರೆ.

ಕಾನಾಹೊಸಹಳ್ಳಿ ಸಮೀಪದ ತಿಪ್ಪೆಹಳ್ಳಿ ಗ್ರಾಮದಲ್ಲಿ ಕಳೆದ ಶನಿವಾರ ಚಿತ್ರದುರ್ಗ ವಿಜಯನಗರ ಗಡಿ ತಿಪ್ಪೆಹಳ್ಳಿಯ ಸಮೀಪ ಅಬ್ಬೇನಹಳ್ಳಿ ಯ ನೇತ್ರಾವತಿ ಎನ್ನುವ ಮಹಿಳೆಯನ್ನು ಅತ್ಯಾಚಾವೆಸಗಿ ಹತ್ಯೆ ಮಾಡಲಾಗಿತ್ತು ಈ ಘಟನೆಯಿಂದ ಗಡಿಗ್ರಾಮಗಧ ಜನರು ಬೆಚ್ಚಿಬಿದ್ದಿದ್ದರು ಘಟನಾ ಸ್ಥಳಕ್ಕೆ ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಭೇಟಿ ನೀಡಿದ್ದರು ಹತ್ಯೆಯಾದ ಮಹಿಳೆಯ ಸಹೋದರಿ ನೀಡಿದ ದೂರಿನಂತೆ ಕಾನಾಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಅಷ್ಟರಲ್ಲಿ ಪ್ರಕರಣ ಭೇದಿಸಲು ವಿಶೇಷ ತಂಡ ರಚನೆ ಮಾಡಿದ ಪೊಲೀಸರು ಕೇವಲ‌ 48 ಗಂಟೆಯ ಒಳಗಾಗಿ ಕೃತ್ಯ ಎಸಗಿದ ಕಾಟ್ರಳ್ಳಿ ಓಬಣ್ಣ (30) ಎನ್ನುವ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ,

ಆರೋಪಿ ಕಾಟ್ರಳ್ಳಿ ಓಬಣ್ಣ ಕಾತ್ರಿಕೆಹಟ್ಟಿ ಗ್ರಾಮದವನಾಗಿದ್ದು, ಪ್ರಕರಣ ಭೇಧಿಸುವ ತಂಡದಲ್ಲಿ ಡಿವೈಎಸ್ ಪಿ ಮಲ್ಲೇಶಪ್ಪ ಮಲ್ಲಾಪುರ, ಸಿಪಿಐ ವೆಂಕಟಸ್ವಾಮಿ, ಪಿಎಸೈ ಸಿದ್ದರಾಮ ಬಿದರಾಣಿ, ಸಿಬ್ಬಂದಿಗಳಾದ,ಕೃಷ್ಣಪ್ಪ,ಕೊಟ್ರೇಶ್ ಅಂಗಡಿ,ವಿಜಯಕುಮಾರ್, ಮಂಜುನಾಥ,ಅಂಜಿನಮೂರ್ತಿ,ಕಲ್ಲೇಶ್ ಪೂಜಾರ್, ವಿಜಯಕುಮಾರ್, ಎನ್ ಎಂ ಸ್ವಾಮಿ, ಸಂದೀಪ್,ಸಿದ್ದಲಿಂಗಪ್ಪ, ಗೌಡ್ರು ರವಿಚಂದ್ರ, ಕೃಷ್ಣ ನಾಯ್ಕ, ತಂಡಕ್ಕೆ ವಿಜಯನಗರ ಎಸ್ ಪಿ ಹರಿಬಾಬು ಅವರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ


Spread the love

About Laxminews 24x7

Check Also

ಹಾಲಿ ಶಿಕ್ಷಕರೂ TET ಬರೆಯಬೇಕೆಂಬ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ: ಮಧು ಬಂಗಾರಪ್ಪ

Spread the loveಶಿವಮೊಗ್ಗ: “ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆ ತರಲು ನಿವೃತ್ತಿ ಅಂಚಿನಲ್ಲಿರುವವರನ್ನು ಹೊರತುಪಡಿಸಿ, ಉಳಿದೆಲ್ಲ ಶಿಕ್ಷಕರು ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ