Breaking News

ಜಮಾತ್‌-ಇ-ಇಸ್ಲಾಮಿ ಹಿಂದ್‌ನಿಂದ‌ ನೈತಿಕತೆಯೇ ಸ್ವಾತಂತ್ರ್ಯ ಅಭಿಯಾನ ಸೆ.1ರಿಂದ

Spread the love

ಬೆಳಗಾವಿ: ‘ಜಮಾತ್‌-ಇ-ಇಸ್ಲಾಮಿ ಹಿಂದ್‌’ ವತಿಯಿಂದ ನೈತಿಕತೆಯೇ ಸ್ವಾತಂತ್ರ್ಯ ಅಭಿಯಾನ ಸೆ.1ರಿಂದ 30ರವರೆಗೆ ನಡೆಯಲಿದೆ’ ಎಂದು ಸಂಘಟನೆಯ ರಾಜ್ಯ ಮಹಿಳಾ ಘಟಕದ ಸಲಹಾ ಪರಿಷತ್ತಿನ ಸದಸ್ಯೆ ಸಾಜೀದುನ್‌ ನಿಸ್ಸಾ ಲಾಲ್ಮಿಯ ಹೇಳಿದರು.

ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ, ಕೊಲೆ ಪ್ರಕರಣಗಳು ದೇಶದ ಶಾಂತಿ ಮತ್ತು ಪ್ರಗತಿಗೆ ಧಕ್ಕೆ ತರುತ್ತಿವೆ.

ಮಹಿಳೆಯರ ಆತ್ಮಹತ್ಯೆಗಳ ಪ್ರಮಾಣವೂ ಏರಿಕೆಯಾಗಿದೆ. ಸಮಾಜದಲ್ಲಿ ಸ್ತ್ರೀಯರಿಗೆ ಅಸುರಕ್ಷಿತ ವಾತಾವರಣ ನಿರ್ಮಾಣವಾಗಿದೆ. ನೈತಿಕ ಮೌಲ್ಯಗಳ ಕುಸಿತ, ಪೋರ್ನೋಗ್ರಫಿಯ ಅತಿಯಾದ ಬಳಕೆಯೇ ಇದಕ್ಕೆ ಕಾರಣ. ಹಾಗಾಗಿ ನಿಜವಾಗಿ ಸ್ವಾತಂತ್ರ್ಯ ಎಂದರೇನು? ಇದರಲ್ಲಿ ನೈತಿಕತೆ ಪಾತ್ರವೇನು ಎನ್ನುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಒಂದಿಡೀ ತಿಂಗಳು ಅಭಿಯಾನ ಕೈಗೊಳ್ಳುತ್ತಿದ್ದೇವೆ’ ಎಂದರು.

‘ಶಿಕ್ಷಣ ತಜ್ಞರು, ವಕೀಲರು, ಧರ್ಮಗುರುಗಳು, ಸಮುದಾಯದ ನೇತಾರರ ಸಹಕಾರದೊಂದಿಗೆ ರಾಷ್ಟ್ರೀಯ ಮಟ್ಟದಿಂದ ಸ್ಥಳೀಯ ಮಟ್ಟದವರೆಗೆ ವಿವಿಧ ಹಂತಗಳಲ್ಲಿ ಈ ಅಭಿಯಾನ ನಡೆಯಲಿದೆ. ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಬಗ್ಗೆ ವಿದ್ಯಾರ್ಥಿಗಳು ಮತ್ತು ಯುವಜನರಲ್ಲಿ ಜಾಗೃತಿಗಾಗಿ ಕಾಲೇಜು ಕ್ಯಾಂಪಸ್‌ಗಳಲ್ಲಿ ವಿಶೇಷ ಕಾರ್ಯಕ್ರಮ ನಡೆಯಲಿವೆ. ಇದರೊಂದಿಗೆ ಚರ್ಚಾ ಗೋಷ್ಠಿಗಳು, ವಿವಿಧ ಸ್ಪರ್ಧೆಗಳನ್ನೂ ಸಂಘಟಿಸಲಿದ್ದೇವೆ’ ಎಂದು ತಿಳಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷೆ ಶಗುಫ್ತಾ ಲಾಡ್‌ಜಿ, ನಗರ ಘಟಕದ ಅಧ್ಯಕ್ಷ ಹಲೀಮಾ ಸರಾಫ್‌, ಸಾಹಿಸ್ತಾ ಪಠಾಣ ಇತರರಿದ್ದರು.


Spread the love

About Laxminews 24x7

Check Also

ಈ ವರ್ಷ 5 ಸಾವಿರ ಸರ್ಕಾರಿ ಶಾಲೆಗಳಲ್ಲಿ ಎಲ್​​ಕೆಜಿ, ಯುಕೆಜಿ ಕಾರ್ಯಾರಂಭ: ಸಚಿವ ಮಧು ಬಂಗಾರಪ್ಪ

Spread the love ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಿಸಲು ಹಾಗೂ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಆದ್ಯತೆಯಾಗಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ