Breaking News

ರಾಜ್ಯದಲ್ಲಿ ರಮ್​, ವಿಸ್ಕಿ,ಬ್ರಾಂಡಿ ಕೊರತೆ

Spread the love

ಬೆಂಗಳೂರು:ಪ್ರೀಮಿಯಂ ಮದ್ಯದ ದರ ಇಳಿಸಿದ ಬೆನ್ನಲ್ಲೇ ರಮ್​, ವಿಸ್ಕಿ,ಬ್ರಾಂಡಿ ಮದ್ಯಗಳ ಕೊರತೆಯಾಗಿದೆ.

ರಾಜ್ಯದಲ್ಲಿ 32ಗಿಂತ ಅಧಿಕ ಮದ್ಯ ತಯಾರಿಕಾ ಕಂಪನಿಗಳಿವೆ.ಪ್ರತಿ ನಿತ್ಯ ಆಯಾ ಕಂಪನಿಗಳು ತಮ್ಮ ಬ್ರ್ಯಾಂಡ್​​ ಅಡಿ ಮದ್ಯ ತಯಾರಿಸಿ ಸರ್ಕಾರಕ್ಕೆ ತೆರಿಗೆ ಪಾವತಿಸಿ ಮದ್ಯ ಮಾರಾಟ ಮಾಡುತ್ತಿವೆ.

ಆದರೆ, ಪ್ರೀಮಿಯಂ ಮದ್ಯದ ದರ ಇಳಿಸಿದ ಬೆನ್ನಲ್ಲೇ ಕೆಲ ತಯಾರಿಕಾ ಕಂಪನಿಗಳು ಸೂಕ್ತವಾಗಿ ಮದ್ಯವನ್ನು ಉತ್ಪಾದಿಸುತ್ತಿಲ್ಲ. ಇದರಿಂದಾಗಿ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತದಲ್ಲಿ (ಕೆಎಸ್​ಬಿಸಿಎಲ್​) ಸೂಕ್ತ ಮದ್ಯ ದಾಸ್ತಾನು ಇಲ್ಲದೆ ಮದ್ಯದಂಗಡಿ ಮಾಲೀಕರು ಪರದಾಡುತ್ತಿದ್ದಾರೆ.ಸರ್ಕಾರ ನಿಗದಪಡಿಸಿದ್ದ ಆದಾಯ ಗುರಿ ತಲುಪಲು ಇಲಾಖೆ ಅಧಿಕಾರಿಗಳು ಸಹ ಸಂಕಟ ಪಡುತ್ತಿದ್ದಾರೆ.

ರಾಜ್ಯದಲ್ಲಿ 3,988 ವೈನ್​ಶಾಪ್​(ಸಿಎಲ್​2), 279 ಕ್ಲಬ್​ (ಸಿಎಲ್​4), 78 ಸ್ಟಾರ್​ ಹೋಟೆಲ್​ ( ಸಿಎಲ್​6ಎ), 2,382 ಹೋಟೆಲ್​ ಮತ್ತು ವಸತಿ ಗೃಹ (ಸಿಎಲ್​-7), 68 ಮಿಲಿಟರಿ ಕ್ಯಾಂಟಿನ್​ ಮಳಿಗೆ (ಸಿಎಲ್​8), 3,634 ಬಾರ್​ ಆಯಂಡ್​ ರೆಸ್ಟೋರೆಂಟ್​ (ಸಿಎಲ್​9), 1,041 ಎಂಎಸ್​ಐಎಲ್​ (ಸಿಎಲ್​11ಸಿ) ಮತ್ತು 745 ಆರ್​ವಿಬಿ ಸೇರಿ ಒಟ್ಟು 12,614 ಮದ್ಯದಂಗಡಿಗಳಿವೆ. ಪ್ರತಿ ನಿತ್ಯ ಮದ್ಯ ಮಾರಾಟದಿಂದಾಗಿ 65-70 ಕೋಟಿ ರೂ.ಇಲಾಖೆ ಮೂಲಕ ಸರ್ಕಾರಕ್ಕೆ ಆದಾಯ ಬರುತ್ತಿದೆ.


Spread the love

About Laxminews 24x7

Check Also

ಬೈಕ್ – ಹಾಲಿನ ವಾಹನ ನಡುವೆ ಡಿಕ್ಕಿ; ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವು

Spread the loveಶಿವಮೊಗ್ಗ: ಹಾಲಿನ ವಾಹನ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಶಿವಮೊಗ್ಗದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ