ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಳ್ಳಾರಿ ಸೆಂಟ್ರಲ್ ಜೈಲಿಗೆ ನಟ ದರ್ಶನ್‌ನ್ನು ಸ್ಥಳಾಂತರ ಮಾಡಲು ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.
ಐಷರಾಮಿ ಸವಲತ್ತು ಮತ್ತು ರೌಡಿ ಸಹವಾಸ ಮಾಡಿದ್ದ ದರ್ಶನ್ ಫೋಟೋ, ವಿಡಿಯೋ ವೈರಲ್ ಆಗಿದ್ದವು. ಇದರಿಂದ ಸರ್ಕಾರಕ್ಕೆ ಮತ್ತು ಗೃಹ ಇಲಾಖೆಗೆ ಮುಜುಗರ ಉಂಟಾಗಿತ್ತು.
ಈ ಹಿನ್ನೆಲೆಯಲ್ಲಿ ರೇಣುಕಸ್ವಾಮಿ ಕೊಲೆ ಕೇಸಿನ ಆರೋಪಿಗಳನ್ನು ಸ್ಥಳಾಂತರ ಮಾಡಲು ಅನುಮತಿ ನೀಡುವಂತೆ ಪೊಲೀಸರು ಮತ್ತು ಜೈಲಾಧಿಕಾರಿಗಳು ಕೋರ್ಟ್ ಮೊರೆ ಹೋಗಿದ್ದರು. ಮನವಿಗೆ ಸಮ್ಮತಿ ಸೂಚಿಸಿರುವ ಕೋರ್ಟ್ ವಿಚಾರಣಾಧೀನ ಕೈದಿಗಳ ಸ್ಥಳಕ್ಕೆ ಆದೇಶಿಸಿದೆ.
ಕುಟುಂಬ ಸದಸ್ಯರು, ಸಂಬಂಧಿಕರು, ಸ್ನೇಹಿತರು ಇಷ್ಟು ದಿನ ತುಂಬಾ ಸಲೀಸಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಬಂದು ದರ್ಶನ್‌ನನ್ನು ಭೇಟಿಯಾಗಿ ಹೋಗುತ್ತಿದ್ದರು. ಬಳ್ಳಾರಿ ಜೈಲಿಗೆ ದರ್ಶನ್, ಸ್ಥಳಾಂತರವಾದರೆ ಕುಟುಂಬ ಸದಸ್ಯರು ಮತ್ತು ಆಪ್ತರು ಭೇಟಿಯಾಗಲು ಸಮಸ್ಯೆ ಆಗಲಿದೆ.
ಯಾರ‌್ಯಾರು ಯಾವ ಜೈಲಿಗೆ
ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲ್
ಪವನ್, ರಾಘವೇಂದ್ರ, ನಂದೀಶ್ ಮೈಸೂರು
ಜಗದೀಶ್ ಶಿವಮೊಗ್ಗ
ಧನರಾಜ್ ಧಾರವಾಡ
ವಿನಯ್ ವಿಜಯಪುರ
ನಾಗರಾಜ್ ಕಲಬುರಗಿ
ಲಕ್ಷ್ಮಣ ಶಿವಮೊಗ್ಗ
ಪ್ರದೂಷ್ ಬೆಳಗಾವಿ
ಪವಿತ್ರಾಗೌಡ, ಅನುಕುಮಾರ್, ದೀಪಕ್ ಪರಪ್ಪನ ಅಗ್ರಹಾರ