Breaking News

ಐಸಿಸಿಆರ್ ಅಧ್ಯಕ್ಷರನ್ನು ಭೇಟಿಯಾದ ಡಾ. ಸೋನಾಲಿ ಸರನೋಬಾತ್

Spread the love

ಐಸಿಸಿಆರ್ ಅಧ್ಯಕ್ಷರನ್ನು ಭೇಟಿಯಾದ ಡಾ. ಸೋನಾಲಿ ಸರನೋಬಾತ್

ದೆಹಲಿ: ಭಾರತೀಯ ಸಂಸ್ಕೃತಿಕ ಸಂಬಂಧಗಳ ಮಂಡಳಿಯ ಅಧ್ಯಕ್ಷ (ಐಸಿಎಂಆರ್) ಡಾ. ವಿನಯ ಸಹಸ್ತ್ರಬುದ್ಧೆ ಅವರು ನವದೆಹಲಿಯಲ್ಲಿ ಲಲಿತಕಲಾ ಅಕಾಡೆಮಿ ಸದಸ್ಯೆ ಡಾ. ಸೋನಾಲಿ ಸರನೋಬಾತ್ ಅವರು ಭೇಟಿ ಮಾಡಿ ಕೆಲಹೊತ್ತು ಚರ್ಚೆ ನಡೆಸಿದರು. ಡಾ. ಸೋನಾಲಿಗೆ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಉತ್ತಮ ಪರ್ಚಾನೆ ಸಾಥ್ ನೀಡಿದ್ದಾರೆ.

ಲಲಿತಕಲಾ ಅಕಾಡೆಮಿಯ ಯೋಜನೆಗಳ ಅನುಷ್ಠಾನ ಹಾಗೂ ಅದಕ್ಕೆ ಎದುರಾಗುವ ಸವಾಲುಗಳು, ಅಕಾಡೆಮಿ‌ ಕಾರ್ಯವ್ಯಾಪ್ತಿ ವಿಸ್ತರಣೆ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಲಲಿತಕಲಾ ಅಕಾಡೆಮಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಜತೆಗೆ ಅಭಿವೃದ್ಧಿ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಡಾ. ಸಹಸ್ತ್ರಬುದ್ಧೆ ಅವರು ಸೋನಾಲಿಗೆ ಭರವಸೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಹಲವು ಸಮಾಜಿಕ ಕಾರ್ಯಗಳ ಮೂಲಕ ಡಾ. ಸೋನಾಲಿ ಜನರ ಮೆಚ್ಚುಗೆ ಗಳಿಸಿದ್ದಾರೆ. ಅಲ್ಲದೆ ಹಲವು ಸುಧಾರಣಾ ಸಮಿತಿ ರಚಿಸಿ ಮಹಿಳೆಯರಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ. ಅಲ್ಲದೇ ಬೆಳಗಾವಿಯಲ್ಲಿ ಲಲಿತಕಲಾ ಅಕಾಡೆಮಿ ಪ್ರಾದೇಶಿಕ ಕೇಂದ್ರ ಸ್ಥಾಪಿಸುವಂತೆಯೂ ಪ್ರಸ್ತಾವನೆ ಸಲ್ಲಿಸಿದ್ದರು. ಈ ಬಗ್ಗೆಯೂ ಡಾ. ಸೋನಾಲಿಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ.


Spread the love

About Laxminews 24x7

Check Also

ಹುಕ್ಕೇರಿ ನಗರ ಅಭಿವೃದ್ಧಿಗೆ ಶ್ರಮಿಸಲಾಗುವದು – ಸಚಿವ ಸತೀಶ ಜಾರಕಿಹೋಳಿ

Spread the love ಹುಕ್ಕೇರಿ : ಹುಕ್ಕೇರಿ ನಗರ ಅಭಿವೃದ್ಧಿಗೆ ಶ್ರಮಿಸಲಾಗುವದು – ಸಚಿವ ಸತೀಶ ಜಾರಕಿಹೋಳಿ ಹುಕ್ಕೇರಿ ನಗರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ