ಬೆಂಗಳೂರು: ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಚಿತ್ರದುರ್ಗದ ಮೂಲವ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಸಹಿಸಿದ್ದಾನೆ ಎಂದು ಸ್ಯಾಂಡಲ್ವುಡ್ ನಟ ದರ್ಶನ್ ಆತನನ್ನು ಕೊಲೆ ಮಾಡಿದ್ದಾರೆ ಎನ್ನುವ ಆರೋಪದಲ್ಲಿ ಡಿ ಗ್ಯಾಂಗ್ ಜೈಲಿನಲ್ಲಿದೆ. ಈ ಪ್ರಕರಣ ತನಿಕೆ ಹಂತದಲ್ಲಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವಾಗ ಈಗ ಕೆಲವು ಫೋಟೋ ಹಾಗೂ ವಿಡಿಯೋಗಳು ಮತ್ತೊಂದು ಹಂತದಲ್ಲಿ ಸುದ್ದಿ ಮಾಡುತ್ತಿವೆ.
ನಿನ್ನೆ ಒಂದು ಫೋಟೋ ವಿಡಿಯೋ ಆದ್ರೆ ಇಂದೂ ಒಂದು ಫೋಟೋ ವೈರಲ್ ಆಗಿದೆ.
ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪಕ್ಕೆ ಪುಷ್ಠಿ ನೀಡುವಂತೆ ನಿನ್ನೆ ದರ್ಶನ ತನ್ನ ಸಹಚರರ ಜೊತೆ ಕುಳಿತು ಸಿಗರೇಟ್ ಎಳೆಯುತ್ತಿರುವ ಫೋಟೋವೊಂದು ವೈರಲ್ ಆಗಿತ್ತು. ಸ್ವಲ್ಪ ಸಮಯ ರೌಡಿಶೀಟರ್ ಜತೆ ವಿಡಿಯೋ ಕಾಲ್ ಮಾಡಿರುವ ವಿಡಿಯೋ ಕೂಡಾ ಸಂಚಲ ಸೃಷ್ಟಿ ಮಾಡಿತ್ತು.
ಈಗ ಮತ್ತೊಂದು ಫೋಟೋ ಸಿಕ್ಕಿದ್ದು, ಈ ಫೋಟೋದಲ್ಲಿ ದರ್ಶನ್ ಬೆಡ್ ಮೇಲೆ ಕುಳಿತುಕೊಂಡಿದ್ದು, ಕೈಯಲ್ಲಿ ಮೊಬೈಲ್ ಫೋನ್ ಹಿಡಿದುಕೊಂಡು ಚಾಟ್ ಮಾಡುತ್ತಿರುವ ದೃಶ್ಯವಿದೆ. ಇದು ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ.
ದರ್ಶನ್ ಜೈಲಿನಲ್ಲಿ ಆರಾಮವಾಗಿಯೇ ಇದ್ದಾರೆ ಎನ್ನುವ ಎಂಬ ಮಾಹಿತಿ ಸಿಕ್ಕಿದೆ. ಈ ಘಟನೆಯಿಂದ ಇದರಿಂದ ಪರಪ್ಪನ ಅಗ್ರಹಾರ ಜೈಲಿನ ಮತ್ತೊಂದು ಮುಖ ಬಯಲಾಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ.