Breaking News

ಬೆಳಗಾವಿ: ‘ಚತುರ್ಥಿಗೆ ಗಣೇಶ ಮೂರ್ತಿಗಳ ಸಿದ್ಧತೆ

Spread the love

ಬೆಳಗಾವಿ: ‘ವಿಘ್ನ ನಿವಾರಕ’ ಗಣೇಶನ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ. ಒಂದೆಡೆ ಅದ್ದೂರಿಯಾಗಿ ‘ಚೌತಿ’ ಆಚರಣೆಗೆ ಜನರು ತಯಾರಿ ನಡೆಸಿದ್ದರೆ, ಮತ್ತೊಂದೆಡೆ ಮೂರ್ತಿಕಾರರು ತಾವು ಸಿದ್ಧಪಡಿಸಿದ ಮೂರ್ತಿಗಳಿಗೆ ಅಂತಿಮ ಸ್ಪರ್ಶ ಕೊಡುತ್ತಿದ್ದಾರೆ.

‘ಪ್ಲಾಸ್ಟಿಕ್‌ ಆಫ್‌ ಪ್ಯಾರೀಸ್‌(ಪಿಒಪಿ)ನಿಂದ ತಯಾರಿಸಿದ ಗಣೇಶನ ಮೂರ್ತಿ ನಿಷೇಧಿಸಲಾಗುವುದು’ ಎನ್ನುವ ಈ ಸಲವೂ ಕಡತಕ್ಕೇ ಸೀಮಿತವಾಗಿದೆ.

ಹಲವು ಮೂರ್ತಿಕಾರರು ನಿಯಮ ಗಾಳಿಗೆ ತೂರಿ, ಇಂಥ ಮೂರ್ತಿ ತಯಾರಿಕೆಯಲ್ಲಿ ನಿರತವಾಗಿದ್ದಾರೆ. ಜತೆಗೆ, ಮಹಾರಾಷ್ಟ್ರದಿಂದಲೂ ಅಪಾರ ಪ್ರಮಾಣದಲ್ಲಿ ಪಿಒಪಿ ಮೂರ್ತಿಗಳು ಬೆಳಗಾವಿ ಮಾರುಕಟ್ಟೆ ಪ್ರವೇಶಿಸಿವೆ.

ಈ ಮಧ್ಯೆ, ಕೆಲವರು ಮಣ್ಣಿನಲ್ಲಿ ಗಣೇಶನನ್ನು ತಯಾರಿಸಿ, ರಾಸಾಯನಿಕ ರಹಿತವಾದ ಬಣ್ಣ ಬಳಿದು ಪರಿಸರ ಕಾಳಜಿ ಮೆರೆಯುತ್ತಿದ್ದಾರೆ. ಆದರೆ, ಮಣ್ಣಿನ ಮೂರ್ತಿಗೆ ಹೋಲಿಸಿದರೆ ಪಿಒಪಿ ಮೂರ್ತಿ ಅಗ್ಗ. ಹಾಗಾಗಿ ಜನರೂ ಪಿಒಪಿ ವಿಗ್ರಹಕ್ಕೆ ಹೆಚ್ಚಾಗಿ ಬೇಡಿಕೆ ಸಲ್ಲಿಸುತ್ತಿರುವುದು ಕಂಡುಬರುತ್ತಿದೆ.

ಪರಿಸರ ಸ್ನೇಹಿ ಗಣಪ: ‘ಯಾವುದೇ ಊರಲ್ಲಿ ಮಣ್ಣಿನಲ್ಲಿ ತಯಾರಿಸಿದ ಮತ್ತು ಪಿಒಪಿಯಲ್ಲಿ ನಿರ್ಮಿಸಿದ ಮೂರ್ತಿ ಖರೀದಿಸುವ ಎರಡೂ ಮಾದರಿ ಗ್ರಾಹಕ ಇರುತ್ತಾರೆ. ಆದರೆ, ನಾವು ಮೂರು ತಲೆಮಾರಿನಿಂದ ಪರಿಸರ ಸ್ನೇಹಿ ಗಣಪನನ್ನೇ ತಯಾರಿಸುತ್ತಿದ್ದೇವೆ. ಈ ವರ್ಷ 250 ಮೂರ್ತಿ ತಯಾರಾಗುತ್ತಿವೆ. ಪ್ರತಿ ಮೂರ್ತಿಯ ದರ ₹600ರಿಂದ ₹2 ಸಾವಿರದವರೆಗೆ ಇದೆ’ ಎಂದು ತಾಲ್ಲೂಕಿನ ಶಿಂಧೊಳ್ಳಿಯ ಮೂರ್ತಿಕಾರ ಸುರೇಶ ಬಡಿಗೇರ ತಿಳಿಸಿದರು.

‘ಈ ಬಾರಿ ಮೇ ತಿಂಗಳಲ್ಲಿ ಕೆಲಸ ಆರಂಭಿಸಿದ್ದೇವೆ. ಹಂತ-ಹಂತವಾಗಿ ತಯಾರಾಗುತ್ತಿರುವ ಮೂರ್ತಿಗಳಿಗೆ ಬಣ್ಣ ಬಳಿಯುತ್ತೇವೆ. ಹಬ್ಬ ಸಮೀಪಿಸಿದಂತೆ, ಗ್ರಾಹಕರ ಬೇಡಿಕೆ ಪೂರೈಸಲು ಹಗಲು-ರಾತ್ರಿಯಿಡೀ ದುಡಿಯುತ್ತೇವೆ’ ಎಂದರು.

ಪರಿಸರಕ್ಕೆ ಹಾನಿ ಮಾಡಲ್ಲ:

‘ಬದುಕಿನ ಬಂಡಿ ದೂಡಲು ನನಗೆ ಪಾನ್‌ಶಾಪ್‌ ಇದೆ. ಇದರ ಮಧ್ಯೆ ಹವ್ಯಾಸವೆಂದು ಕಳೆದ ಆರು ವರ್ಷಗಳಿಂದ ಮಣ್ಣಿನ ಗಣೇಶನನ್ನು ಸಿದ್ಧಪಡಿಸುತ್ತಿದ್ದೇನೆ. ಈ ವರ್ಷ ನನ್ನ ಕೈಚಳಕದಲ್ಲಿ 25ಕ್ಕೂ ಅಧಿಕ ಮೂರ್ತಿ ಅರಳಲಿವೆ. ಲಾಭ ಕಡಿಮೆ ಬಂದರೂ ಪರವಾಗಿಲ್ಲ. ಆದರೆ, ಪಿಒಪಿ ಮೂರ್ತಿ ತಯಾರಿಸಿ ಪರಿಸರಕ್ಕೆ ಹಾನಿ ಮಾಡುವುದಿಲ್ಲ’ ಎನ್ನುತ್ತಾರೆ ಇಲ್ಲಿನ ಮಹಾದ್ವಾರ ರಸ್ತೆಯ ಮೂರ್ತಿಕಾರ ವಸಂತ ವೆಂಕಪ್ಪ ನಾಯ್ಕ.

ಪಿಒಪಿ ಮೂರ್ತಿ ತಯಾರಿಕೆ ಕುರಿತು ಪ್ರತಿಕ್ರಿಯೆ ಪಡೆಯಲು ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಅವರನ್ನು ಸಂಪರ್ಕಿಸಿದರೂ ಲಭ್ಯವಾಗಲಿಲ್ಲ.


Spread the love

About Laxminews 24x7

Check Also

ಅಕ್ರವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ.

Spread the loveಅಕ್ರವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಬೆಳಗಾವಿ ಪೊಲೀಸರು ದಾಳಿ ನಡೆಸಿ 12 ಆರೋಪಿಗಳನ್ನು ಬಂಧಿಸಿದ್ದಾರೆ. ನಂದಿಹಳ್ಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ