ಯಮಕನಮರಡಿ ವಿಧಾನಸಭಾ ಮತಕ್ಷೇತ್ರದ ದಡ್ಡಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಪೂರ್ವಭಾವಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಕರ್ನಾಟಕ ಸರ್ಕಾರ “ವಿಶ್ವಗುರು ಶ್ರೀ ಬಸವಣ್ಣನವರಿಗೆ” “ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕ” ಎಂದು ಘೋಷಿಸಿದ ಪ್ರಯುಕ್ತ ಸೆ. 5 ರಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರಿಗೆ ಯಮನಮರಡಿಯ ಎನ್ .ಎಸ್. ಎಫ್ ಶಾಲಾ ಆವರಣದಲ್ಲಿ ಪಕ್ಷಾತೀತವಾಗಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಈ ಸಮಾರಂಭವನ್ನು ಸರ್ವ ಲಿಂಗಾಯತ ಸಮಾಜದ ಬಾಂಧವರು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಬುದ್ದ, ಬಸವ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದಾರಿಯಲ್ಲಿ ಸಾಗುತ್ತಿರುವ ಸಚಿವ ಸತೀಶ್ ಜಾರಕಿಹೊಳಿ ಅವರು ಕಳೆದ ಇಪ್ಪತ್ತು ವರ್ಷಗಳಿಂದ ಬಸವನಣ್ಣವರ ತತ್ವಾದರ್ಶಗಳನ್ನು ಜನತೆಗೆ ತಿಳಿಸುವ ಕಾರ್ಯ ಮಾಡುತ್ತಿದ್ದಾರೆ. ನಾವು ಕೂಡ ಸಮಾಜದ ವತಿಯಿಂದ ಪ್ರತಿ ಹಳ್ಳಿಗಳಲ್ಲಿಯೂ ಮೌಢ್ಯತೆ ನಿವಾರಣೆಗಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಲ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಲಿಂಗಾಯತ ಸಮಾಜದ ಮುಖಂಡರಾದ ಮಲಗೌಡ ಪಾಟೀಲ್, ಮಹಾಂತೇಶ ಮಗದುಮ್, ಈರಣ್ಣ ಬಿಸಿರೊಟ್ಟಿ, ಕಣಗನ್ನಿ ವಕೀಲರು, ಬಸವರಾಜ ದೇಸಾಯಿ, ಬರಮಾ ಹಳ್ಳೂರಿ, ಪ್ರಮೋದ ರಗಶೆಟ್ಟಿ, ಮಹೇಶ ಹತ್ತರಗಿ, ರಾಹುಲ್ ಮುಂಗರವಾಡಿ, ದಯಾನಂದ ಪಾಟೀಲ್, ನಾಗಪ್ಪಾ ನಾಯಕ ಸೇರಿದಂತೆ ದಡ್ಡಿ, ಗುಡಗನಟ್ಟಿ, ಮಾನಗಾಂವ, ನಾಗನೂರ ಹಾಗೂ ಅತ್ತಿಹಾಳ ಗ್ರಾಮಸ್ಥರ ಸಮಸ್ತ ಲಿಂಗಾಯತ ಸಮಾಜದ ಬಾಂಧವರು ಉಪಸ್ಥಿತರಿದ್ದರು