ಮೂಡಲಗಿ: ‘ಮೂಡಲಗಿ ಕುರುಹಿನಶೆಟ್ಟಿ ಅರ್ಬನ್ ಕೋ- ಆಪ್ ಕ್ರೆಡಿಟ್ ಸೊಸೈಟಿಯು 2023-24ನೇ ಆರ್ಥಿಕ ವರ್ಷದ ಕೊನೆಯಲ್ಲಿ ₹4.93 ಕೋಟಿ ಲಾಭ ಗಳಿಸಿ ಪ್ರಗತಿಯಲ್ಲಿ ಸಾಗಿದೆ’ ಎಂದು ಸೊಸೈಟಿಯ ಅಧ್ಯಕ್ಷ ಬಸಪ್ಪ ಚಿ. ಮುಗಳಖೋಡ ಹೇಳಿದರು.
ಇಲ್ಲಿಯ ಕುರುಹಿನಶೆಟ್ಟಿ ಅರ್ಬನ್ ಕೋ- ಆಪ್ ಕ್ರೆಡಿಟ್ ಸೊಸೈಟಿಯ 29ನೇ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಸೊಸೈಟಿಯು ಸದ್ಯ ₹3.90 ಲಕ್ಷ ಶೇರು ಬಂಡವಾಳ, ₹230. 85 ಕೋಟಿ ಠೇವುಗಳು, ₹269.40 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ’ ಎಂದರು.