Breaking News

ಜೈಲಲ್ಲಿ ‘ನಟ ದರ್ಶನ್’ ಸ್ಥಿತಿ ಕಂಡು ಕಣ್ಣೀರಿಟ್ಟ ರಚಿತಾ ರಾಮ್

Spread the love

ಬೆಂಗಳೂರು: ರಾಜನನ್ನು ರಾಜನ ರೀತಿ ನೋಡೋಕೆ ಇಷ್ಟ. ಆದರೇ ಎನ್ನುತ್ತಲೇ ನಟಿ ರಚಿತಾ ರಾಮ್ ಅವರು ಜೈಲಲ್ಲಿ ನಟ ದರ್ಶನ್ ಸ್ಥಿತಿ ಕಂಡು ಕಣ್ಣೀರಿಟ್ಟರು. ಈ ಮೂಲಕ ಭಾವುಕರಾದರು.

ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ನಟಿ ರಚಿತಾ ರಾಮ್ ತೆರಳಿ, ನಟ ದರ್ಶನ್ ಭೇಟಿಯಾದರು.

ಅವರ ಆರೋಗ್ಯ ವಿಚಾರಿಸಿ, ಮಾತನಾಡಿಕೊಂಡ ಬಂತ ನಂದ್ರ, ಸುದ್ದಿಗಾರರೊಂದಿಗೆ ಮಾತನಾಡಿದರು.

ನಾನು ನಟಿ ರಚಿತಾ ರಾಮ್ ಎಂಬುದಾಗಿ ಗುರುತಿಸಿಕೊಳ್ಳಲು ನಟ ದರ್ಶನ್ ಕಾರಣ. ಅವರು ಅಂದು ಅವರ ಬ್ಯಾನರ್ ಅಡಿಯಲ್ಲಿ ನನಗೆ ಅವಕಾಶ ನೀಡದೇ ಇದ್ದಿದ್ದರೇ, ಒಂದು ಮಾತು ನೋ ಎಂದಿದ್ದರೇ ನಾನು ಹೀಗೆ ನಟಿಯಾಗಲು ಸಾಧ್ಯವಾಗುತ್ತಿರಲಿಲ್ಲ ಎಂದರು.

ನಾನು ದರ್ಶನ್ ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದೆ. ಅವರು ಆರೋಗ್ಯವಾಗಿದ್ದಾರೆ. ನಾನು ಅವರ ಸ್ಥಿತಿಯನ್ನು ಕಂಡು ಭಾವುಕರಾದಂತ ವೇಳೆಯಲ್ಲಿ ನಟ ದರ್ಶನ್ ಅವರೇ ನನ್ನನ್ನು ಸಮಾಧಾನಿಸಿದರು. ನನಗೆ ಕಾನೂನಿನ ಮೇಲೆ ನಂಬಿಕೆ ಇದೆ. ನಟ ದರ್ಶನ್ ಆದಷ್ಟು ಬೇಗ ಹೊರಗೆ ಬರ್ತಾರೆ ಅಂತ ತಿಳಿಸಿದರು.


Spread the love

About Laxminews 24x7

Check Also

ರಾಜ್ಯದಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಆಪರೇಷನ್ ಆರಂಭ

Spread the loveಬೆಂಗಳೂರು: ಬಾಂಗ್ಲಾ ದೇಶೀಯರು ಸೇರಿದಂತೆ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರು ವವರನ್ನು ಪತ್ತೆ ಹಚ್ಚಿ, ಗಡೀಪಾರು ಮಾಡುವ ಕಾರ್ಯಾಚರಣೆಯನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ