Breaking News

ಗದ್ದೆಗೆ ನುಗ್ಗಿದ ದೊಡ್ಡ ಹಳ್ಳದ ನೀರು. ನೂರಾರು ಎಕರೆ ಭತ್ತದ ಗದ್ದೆ ಜಲಾವೃತ

Spread the love

ಸಿರುಗುಪ್ಪ: ತಾಲೂಕಿನಲ್ಲಿ ಹರಿಯುವ ದೊಡ್ಡ ಹಳ್ಳದ ನೀರು ನೂರಾರು ಎಕರೆ ಭತ್ತದ ಗದ್ದೆಗಳಿಗೆ ನುಗ್ಗಿದ್ದು, ಗದ್ದೆಗಳಲ್ಲಿ ಎಲ್ಲೆಲ್ಲಿಯೂ ನೀರು ಕಂಡುಬರುತ್ತದೆ.

ತಾಲೂಕಿನ ಕರೂರು, ದರೂರು ಹಾಗಲೂರು, ಹೊಸಹಳ್ಳಿ, ಗೋಸಬಾಳ,ಬೂದುಗುಪ್ಪ ಗ್ರಾಮಗಳ ರೈತರು ನಾಟಿ ಮಾಡಿದ ನೂರಾರು ಎಕರೆ ಭತ್ತದ ಗದ್ದೆಗಳಿಗೆ ನೀರು ನುಗ್ಗಿದ್ದು ಭತ್ತದ ಗದ್ದೆಗಳು ನೀರಿನ ಕೆರೆಗಳಂತೆ ಕಂಡುಬರುತ್ತವೆ

Siruguppa: ಗದ್ದೆಗೆ ನುಗ್ಗಿದ ದೊಡ್ಡ ಹಳ್ಳದ ನೀರು. ನೂರಾರು ಎಕರೆ ಭತ್ತದ ಗದ್ದೆ ಜಲಾವೃತ

ಮಳೆಗಾಲ ಆರಂಭವಾಗಿ ಮೂರು ತಿಂಗಳಾದರೂ ದೊಡ್ಡ ಹಳ್ಳದ ನದಿ ಪಾತ್ರದಲ್ಲಿ ದೊಡ್ಡ ಮಳೆಯಾಗಿರಲಿಲ್ಲ, ಆದರೆ ಕಳೆದ ತಿಂಗಳು ಸುರಿದ ಸಾಮಾನ್ಯ ಮಳೆಯಿಂದ ಹರಿದು ಬಂದ ನೀರನ್ನು ಬಳಸಿಕೊಂಡು ರೈತರು ಇತ್ತೀಚೆಗಷ್ಟೇ ಭತ್ತ ನಾಟಿ ಕಾರ್ಯವನ್ನು ಮಾಡಿದ್ದರು.

ಸೋಮವಾರ ರಾತ್ರಿಯಿಂದ, ಮಂಗಳವಾರ ರಾತ್ರಿವರೆಗೆ ಸುರಿದ ಭಾರಿ ಮಳೆಯಿಂದಾಗಿ ಹಳ್ಳ ಭರ್ತಿಯಾಗಿ ಹರಿಯುತ್ತಿದ್ದು ಭತ್ತದ ಗದ್ದೆಗಳಿಗೆ ಹಳ್ಳದ ನೀರು, ನುಗ್ಗಿದೆ.

ಇತ್ತೀಚೆಗಷ್ಟೇ ಭತ್ತವನ್ನು ನಾಟಿ ಮಾಡಿದ್ದೇವೆ, ಹಳ್ಳದ ಪಾತ್ರದಲ್ಲಿ ದೊಡ್ಡ ಮಳೆಯಾಗಿದ್ದು ನಾಟಿ ಮಾಡಿದ ನಮ್ಮ ಭತ್ತದ ಗದ್ದೆಗಳಿಗೆ ನೀರು ನುಗ್ಗಿದೆ ಎಂದು ಕರೂರು ಗ್ರಾಮದ ರೈತ ಶ್ರೀ ರಾಮಾಂಜನೇಯ ರೆಡ್ಡಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಕರ್ತವ್ಯ ಮುಗಿಸಿಕೊಂಡು ತನ್ನೂರಿಗೆ ತೆರಳುತ್ತಿರುವಾಗ ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡ ಪೊಲೀಸ್ ಶಿವಾನಂದ ಮಾದರ

Spread the love ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಸಹೋದ್ಯೋಗಿ ಶಿವಾನಂದ ಮಾದರ ಅವರು ಮೊನ್ನೆ ದಿನ ರಾತ್ರಿ ಗಸ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ