ರಾಯಚೂರು: ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗ್ಗೆವರೆಗೂ ಭಾರೀ ಮಳೆ ಸುರಿದಿದ್ದು, ಹಳ್ಳ ಕೊಳ್ಳಗಳು ತುಂಬಿ ಹರಿದರೆ ಹೊಲದಲ್ಲೆಲ್ಲ ನೀರು ನುಗ್ಗಿದೆ.
ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಗಧಾರ ಗ್ರಾಮದಲ್ಲಿ ಅಬ್ಬರಿಸಿದ ಮಳೆಯಿಂದ ಹಳ್ಳ ತುಂಬಿ ಹರಿದಿದೆ.
ಗಧಾರ ಗ್ರಾಮದಿಂದ ಯರಗೇರಾಕ್ಕೆ ಹೋಗುವ ಮಾರ್ಗದಲ್ಲಿರುವ ಹಳ್ಳ ತುಂಬಿ ಹರಿಯುತ್ತಿದ್ದು, ಹೊಲ ಗದ್ದೆಗಳಿಗೆ ನೀರು ನುಗ್ಗಿದೆ. ಇದರಿಂದ ಅಪಾರ ಪ್ರಮಾಣದಲ್ಲಿ ಹತ್ತಿ ಹಾಗೂ ಇತರ ಬೆಳೆ ಹಾನಿಗೊಂಡಿವೆ.
ಭಾರಿ ಮಳೆಯಿಂದ ಹಲವೆಡೆ ಸೇತುವೆ ಮೇಲ್ಬಾಗದಲ್ಲಿ ನೀರು ಹರಿಯುವ ಕಾರಣ ಸಂಚಾರ ಸ್ಥಗಿತವಾಗಿತ್ತು. ಇನ್ನೂ ಮಂತ್ರಾಲಯದಲ್ಲೂ ಮಳೆ ಸುರಿದ ಪರಿಣಾಮ ಆರಾಧನೆಗೆ ಆಗಮಿಸಿದ ಭಕ್ತರಿಗೆ ರಾತ್ರಿ ಅಸ್ತವ್ಯಸ್ತಗೊಂಡಿತು. ಕೊನೆಗೆ ಮಠದ ಪ್ರಾಂಗಣದಲ್ಲಿ ಮಲಗಲು ಅನುವು ಮಾಡಿಕೊಡಲಾಯಿತು.