ಇವನ್ಯಾರೋ ಗೋಕಾಕ ಹೊಸ ಎಂ ಎಲ್ ಎ ?? ಪೊಲೀಸರನ್ನ ಎತ್ತಂಗಡಿ ಮಾಡಾಕ್ ಹೋಗಿ ತಾನೇ ಅಂದರ್..
ಹಲೋ ನಾನ್ ಗೋಕಾಕ ಎಂ ಎಲ್ ಎ ಮಾತಾಡೋದ್ರಿ
ನಾ ಹೇಳಿದಂಗ್ ಕೇಳಲಿಲ್ಲ ಅಂದ್ರ ನಿಮ್ಮನ್ನ ಎತ್ತಂಗಡಿ ಮಾಡಿಸ್ತಿನಿ ಹುಷಾರ್ “
ಎಸ್ಪಿ ಐಜಿಗೂ ಎತ್ತಂಗಡಿಯ ಭಯ ಹುಟ್ಟಿಸಿದ್ದ ಖತರ್ನಾಕ್ ಆಸಾಮಿ ಅಂದರ್ , ರಮೇಶ ಜಾರಕಿಹೊಳಿ, ಸತೀಶ ಜಾರಕಿಹೊಳಿ, ಸಿಎಂ ಹೆಸರಲ್ಲಿ ಪೊಲೀಸರಿಗೆ ಧಮ್ಕಿ .
ಎಂ ಎಲ್ ಎ ಎಂ ಪಿ ಹೆಸರಲ್ಲಿ ಧಮ್ಕಿ ಹಾಕಿ ಪೊಲೀಸರ ಅತಿಥಿಯಾದ ಸುನೀಲ್ ದಾಸರ್ , ಸುನೀಲ್ ದಾಸರ್ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅರಭಾವಿ ನಿವಾಸಿ
ಸುನೀಲ್ ದಾಸರ್ 2019 ರಲ್ಲಿ ನಡೆದ ಲೋಕಸಭೆಯ ಸ್ವತಂತ್ರ ಅಭ್ಯರ್ಥಿಯೂ ಆಗಿದ್ದ , ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿಯ ತಾಯಿಯನ್ನು ವಿಚಾರಣೆ ನಡೆಸಿದ್ದ ಪೊಲೀಸರು
ಸಂಬಂಧಿಕರಿಂದ ಹಣ ಪಡೆದು ವಾಪಸ್ ನೀಡದ ಆರೋಪಿ ತಾಯಿ , ತಾಯಿಗೆ ತೊಂದ್ರೆ ಕೊಡ್ತಿದ್ದಿರಿ ಎಂದು ಎಸ್ಪಿ ಐಜಿ ಗೆ ಕರೆ ಮಾಡಿ ಬೆದರಿಕೆ ಹಾಕಿದ್ದ ಭೂಪ
ನನಗೆ ಸಿಎಂ ಗೊತ್ತು ಸಿಎಂ ನನಗೆ ಖಾಸಾ ಖಾಸಾ ನಿಮ್ಮನ್ನ ಎತ್ತಂಗಡಿ ಮಾಡಿಸ್ತಿನಿ ಎಂದಿದ್ದ ಭೂಪ, ಬೆಳಗಾವಿ ಎಸ್ಪಿ ಡಾ,ಭೀಮಾಶಂಕರ್ ಗುಳೇದ,ಐಜಿ ವಿಕಾಸಕುಮಾರ್ ಗೆ ಬೆದರಿಕೆ ಹಾಕಿದ್ದ ಭೂಪ
ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿ ಹೆಡೆಮುರಿ ಕಟ್ಟಿದ ಪೊಲೀಸರು , ಗೋಕಾಕ ನಗರ ಪೊಲೀಸರಿಂದ ಆರೋಪಿ ಬಂಧನ