Breaking News

ಹುಬ್ಬಳ್ಳಿ | ರಕ್ಷಾಬಂಧನ: ರಂಗಿನ ರಾಖಿ ಮೆರುಗು

Spread the love

ಹುಬ್ಬಳ್ಳಿ: ಅಯೋಧ್ಯೆಯ ಶ್ರೀರಾಮ ಮಂದಿರ, ಕೊಳಲು ಉದುವ ಕೃಷ್ಣ, ಗಣಪ, ಕಣ್ಣು ಕುಕ್ಕುವ ಸ್ಟೋನ್‌ಗಳು, ರುದ್ರಾಕ್ಷಿ, ನವಿಲುಗರಿ, ಮುತ್ತಿನಲ್ಲಿ ಪೋಣಿಸಿದ ರಾಖಿಗಳು ಮಾರುಕಟ್ಟೆಯಲ್ಲಿ ಅಂದ ಹೆಚ್ಚಿಸಿಕೊಂಡಿವೆ. ಸರಳ, ಸುಂದರ ಹಾಗೂ ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟ್ರಾಗ್ರಾಮ, ವಾಟ್ಸ್‌ಆಯಪ್‌, ಫೇಸ್ಬುಕ್‌ ಚಿಹ್ನೆ ಇರುವ ರಾಖಿಗಳು ಆಕರ್ಷಿಸುತ್ತಿವೆ.

 

ಹುಬ್ಬಳ್ಳಿಯ ದುರ್ಗದಬೈಲ್‌, ಜನತಾ ಬಜಾರ್‌ ಮತ್ತು ಹಳೇಹುಬ್ಬಳ್ಳಿ ಮಾರುಕಟ್ಟೆಗಳಲ್ಲಿ ತರಹೇವಾರಿ ರಾಖಿಗಳು ಮಾರಾಟಕ್ಕಿದ್ದು, ಮಹಿಳೆಯರು, ಸಹೋದರಿಯರು ತಮ್ಮ ನೆಚ್ಚಿನ ಸಹೋದರರಿಗೆ ರಾಖಿ ಖರೀದಿಸುವ ದೃಶ್ಯ ಕಂಡಿತು.

ಅಯೋಧ್ಯೆಯ ರಾಮ ಮಂದಿರ, ರಾಮ ಚಿತ್ರವಿರುವ ಮತ್ತು ರಾಮ ಎಂದು ಬರೆದಿರುವ ರಾಖಿ ಈ ಬಾರಿ ಹೆಚ್ಚು ಆಕರ್ಷಿಸುತ್ತಿವೆ. ಈ ರಾಖಿಗಳಿಗೆ ಹೆಚ್ಚು ಬೇಡಿಕೆಯಿದೆ.

‘ರಾಖಿಗಳ ವಿನ್ಯಾಸಕ್ಕೆ ತಕ್ಕಂತೆ ದರ ನಿಗದಿಪಡಿಸಲಾಗಿದೆ. ಕನಿಷ್ಠ ₹ 5ರಿಂದ ಗರಿಷ್ಠ ₹ 150ರವರೆಗಿನ ರಾಖಿಗಳು ಲಭ್ಯ ಇವೆ. ಸ್ಪಂಜಿನ ಮೇಲೆ ಚಿತ್ತಾರವಿರುವ ಹಳೇ ಮಾದರಿಗಳ ರಾಖಿಗಳ ಬೇಡಿಕೆ ಈಗ ಕೊಂಚ ಕಡಿಮೆಯಾಗಿದೆ. ವರ್ಷದಿಂದ ವರ್ಷಕ್ಕೆ ಹೊಸ ವಿನ್ಯಾಸದ ರಾಖಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಜನರನ್ನು ಆಕರ್ಷಿಸುತ್ತಿವೆ. ಹಬ್ಬಕ್ಕೂ ಮುನ್ನ ಎರಡು ದಿನ ವ್ಯಾಪಾರ ಜೋರು ಇರುತ್ತದೆ’ ಎಂದು ದುರ್ಗದ ಬೈಲ್‌ನ ರಾಖಿ ಮಳಗಿಯ ವ್ಯಾಪಾರಿ ಶಾನವಾಜ್‌ ಐ.ಅಬ್ದುಲ್ಲನವರ್ ಹೇಳಿದರು.

’15ವರ್ಷಗಳಿಂದ ರಾಖಿ ಹಬ್ಬಕ್ಕೆ ಎಂಟು ದಿನ ಮೊದಲು ಇಲ್ಲಿ ಮಳಿಗೆ ಹಾಕುತ್ತಿದ್ದೇನೆ. ಕೋವಿಡ್‌ ನಂತರ ವ್ಯಾಪಾರ ನಿಧಾನ ಚೇತರಿಸಿಕೊಳ್ಳುತ್ತಿದೆ. ಚೀನಾ ಮತ್ತು ಭಾರತದಿಂದ ರಾಖಿಗಳನ್ನು ತರಿಸುತ್ತೇವೆ’ ಎಂದು ಅವರು ತಿಳಿಸಿದರು.

‘ಕಳೆದ ವರ್ಷಕ್ಕಿಂತ ಈ ವರ್ಷ ವ್ಯಾಪಾರ ಚೆನ್ನಾಗಿದೆ. ಕನಿಷ್ಠ ₹10ರಿಂದ ಗರಿಷ್ಠ 250ರವರೆಗೆ ರಾಖಿಗಳನ್ನು ಮಾರುತ್ತಿದ್ದೇನೆ. ಹೊಸ ಹೊಸ ವಿನ್ಯಾಸಗಳಿದ್ದು, ಜನರು ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಮಕ್ಕಳಿಗಾಗಿ ಕಾರ್ಟೂನ್‌, ಲೈಟಿಂಗ್‌ ಹಾಗೂ ಸ್ಪಿನ್ನರ್‌ ಮಾದರಿಯ ರಾಖಿಗಳು ಲಭ್ಯವಿದ್ದು, ಹೆಚ್ಚು ಬೇಡಿಕೆ ಇವೆ. ₹40ರಿಂದ ₹120ರವರೆಗೆ ಇವುಗಳ ದರವಿದೆ’ ಎಂದು ಹಳೇ ಹುಬ್ಬಳ್ಳಿಯ ರೇಣುಕಾ ಫ್ಯಾನ್ಸಿ ಸ್ಟೋರ್‌ ಮಾಲೀಕ ಮಂಜುನಾಥ ಆಲಗೂರ ಹೇಳಿದರು.

‘ಬಡ ಹಾಗೂ ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತಹ ಕಡಿಮೆ ದರದ ಹಾಗೂ ಸುಂದರ ರಾಖಿಗಳನ್ನು ಮಾರುತ್ತಿದ್ದೇವೆ. ಬಿಸಿಲು ಹಾಗೂ ಮಳೆ ನಡುವೆಯೂ ಜನ ಖರೀದಿಸುತ್ತಿದ್ದಾರೆ’ ಎಂದು ಜನತಾ ಬಜಾರ್ ವ್ಯಾಪಾರಿ ರಮೇಶ ತಿಳಿಸಿದರು.


Spread the love

About Laxminews 24x7

Check Also

5 ಹುಲಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅರಣ್ಯಾಧಿಕಾರಿಗಳಿಗೆ ಕಡ್ಡಾಯ ರಜೆ ನೀಡಿ ಪಿಸಿಸಿಎಫ್ ಆದೇಶಿಸಿದ್ದಾರೆ.

Spread the loveಚಾಮರಾಜನಗರ: ಮಲೆಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಅರಣ್ಯದಲ್ಲಿ 5 ಹುಲಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅರಣ್ಯಾಧಿಕಾರಿಗಳಿಗೆ ಕಡ್ಡಾಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ