Breaking News

ಚಿಕ್ಕೋಡಿ: ಈ ಊರಿನ ಹೆಸರೇ ‘ಸೈನಿಕ ಮಲಿಕವಾಡ’; ಪ್ರತಿ ಮನೆಯಲ್ಲೂ ಇದ್ದಾರೆ ಸೈನಿಕ

Spread the love

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಮಲಿಕವಾಡ ಗ್ರಾಮವು ‘ಸೈನಿಕ ಮಲಿಕವಾಡ’ ಎಂದೇ ಹೆಸರಾಗಿದೆ. ಈ ಊರಿನ ಪ್ರತಿಯೊಂದು ಕುಟುಂಬದಲ್ಲೂ ಕನಿಷ್ಠ ಒಬ್ಬರು ಭಾರತೀಯ ಸೇನೆಯಲ್ಲಿದ್ದಾರೆ.

ಸಿಆರ್‌ಪಿಎಫ್, ಬಿಎಸ್‍ಎಫ್, ಸಿಐಎಸ್‍ಎಫ್, ಎಸ್‍ಎಸ್‍ಬಿ ಸೇರಿ ವಾಯುಪಡೆ, ಭೂಸೇನೆ, ನೌಕಾಪಡೆಯಲ್ಲಿ ಇದ್ದಾರೆ.

 

ಏಳು ದಶಕಗಳಿಂದ ಹೀಗೆ ಸೇನೆ ಸೇರಿದವರ ಸಂಖ್ಯೆ ಬಹಳ ದೊಡ್ಡದು. ಈಗಲೂ 150ಕ್ಕೂ ಹೆಚ್ಚು ಯುವಕರು ಸೇನೆಯಲ್ಲಿದ್ದಾರೆ.

1965ರಲ್ಲಿ ಭಾರತ-ಚೀನಾ ಯುದ್ಧ, 1971ರಲ್ಲಿ ಭಾರತ- ಬಾಂಗ್ಲಾದೇಶ ಯುದ್ಧ ಮತ್ತು 1999ರಲ್ಲಿ ಕಾರ್ಗಿಲ್ ಯುದ್ಧ ಸೇರಿ ಎಲ್ಲ ಸೇನಾ ಕಾರ್ಯಾಚರಣೆಗಳಲ್ಲೂ ಈ ಊರಿನ ಯೋಧರು ಭಾಗಿ ಆಗಿದ್ದಾರೆ. ಕಾರ್ಗಿಲ್ ಯುದ್ಧದಲ್ಲಿ ಈ ಒಂದೇ ಊರಿನ 30 ಸೈನಿಕರು ಸೆಣಸಾಡಿದ್ದಾರೆ.

ಹೊಸ ತಲೆಮಾರಿಗೂ ತರಬೇತಿ: ಗ್ರಾಮದ 300ಕ್ಕೂ ಹೆಚ್ಚು ನಿವೃತ್ತ ಸೈನಿಕರು ಸೇರಿ 2018ರಲ್ಲಿ ಜೈ ಹಿಂದ್ ಅಸೋಶಿಯೇಷನ್ ಎಂಬ ಸಂಘ ಸ್ಥಾಪಿಸಿದ್ದಾರೆ. ಈ ಸಂಸ್ಥೆ ಮೂಲಕ ಪ್ರತಿ ದಿನ ಯುವಕರಿಗೆ ಉಚಿತವಾಗಿ ತರಬೇತಿ ನೀಡಿ, ಸೇನೆ ಸೇರಲು ಅಣಿಗೊಳಿಸುತ್ತಾರೆ. ಬೆಳಿಗ್ಗೆ ಮತ್ತು ಸಂಜೆ ಯುವಕರಿಗೆ ತರಬೇತಿ ನೀಡುತ್ತಾರೆ. ಹೀಗಾಗಿ ಪ್ರತಿ ವರ್ಷ ಇಲ್ಲಿನ 15 ರಿಂದ 20 ಯುವಕರು ಭಾರತೀಯ ಸೇನೆಗೆ ಆಯ್ಕೆಯಾಗುವುದು ಸಾಮಾನ್ಯವಾಗಿದೆ.

‘ಸೇನೆಯಿಂದ ನಿವೃತ್ತರಾದ ಬಳಿಕವೂ ಗ್ರಾಮದ ಅಭಿವೃದ್ಧಿ, ಸ್ವಚ್ಛತೆಗೆ ಶ್ರಮಿಸಬೇಕು ಎಂಬ ನಿಯಮವನ್ನೂ ಈ ಸಂಘ ಮಾಡಿದೆ. ಹೀಗಾಗಿ, ಇಲ್ಲಿ ನಿರಂತರ ಶ್ರಮದಾನ ಇರುತ್ತದೆ. ನಿವೃತ್ತರು ನಿಧನರಾದರೆ ಸಂಸ್ಥೆ ವತಿಯಿಂದ ಸೇನಾ ವಿಧಾನದಂತೆ ಅಂತ್ಯಕ್ರಿಯೆ ಮಾಡುತ್ತಾರೆ. ವೀರ ಮರಣವನ್ನಪ್ಪಿದವರ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುತ್ತಾರೆ’ ಎಂದು ಗ್ರಾಮಸ್ಥರು ತಿಳಿಸಿದರು.


Spread the love

About Laxminews 24x7

Check Also

ಪಿಜಿ-ನೀಟ್ ದೇಶಕ್ಕೆ 9ನೇ RANK ಗಳಿಸಿದDr.ಶರಣಪ್ಪ

Spread the loveಪಿಜಿ-ನೀಟ್ ದೇಶಕ್ಕೆ 9ನೇ ರ‌್ಯಾಂಕ್ ಗಳಿಸಿದ ಡಾ.ಶರಣಪ್ಪ ಬಿಮ್ಸ್ ಮುಕುಟಕ್ಕೆ ಮತ್ತೊಂದು ಗರಿ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ