Breaking News

ಹುಲಿ ಬಂದಿದೆ ಎಂದು ನಕಲಿ ವಿಡಿಯೊ ಹರಿಬಿಟ್ಟ ಇಬ್ಬರು ಪೊಲೀಸ್‌ ವಶಕ್ಕೆ

Spread the love

ಹಿರೇಬಾಗೇವಾಡಿ: ಸಮೀಪದ ಕೊಂಡಸಕೊಪ್ಪ ಮತ್ತು ಯರಮಾಳ ಬಳಿ ಹುಲಿ ಬಂದಿದೆ ಎಂಬ ನಕಲಿ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ವಶಕ್ಕೆ ಪಡೆದರು.

ಕೊಂಡಸಕೊಪ್ಪದ ಶೀತಲ್‌ ಪಾಟೀಲ, ಮಲ್ಲೇಶ ದೇಸಾಯಿ ವಶಕ್ಕೆ ಪಡೆಯಲಾಗಿದೆ.

‘ಈ ಭಾಗದಲ್ಲಿ ಕಾಡುಬೆಕ್ಕು ಓಡಾಡುತ್ತಿದೆ ಎಂಬ ಮಾಹಿತಿ ನಮಗೆ ಸಿಕ್ಕಿತ್ತು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದೆವು. ಈ ಮಧ್ಯೆ, ಹುಲಿ ಓಡಾಡುತ್ತಿರುವ ವಿಡಿಯೊ ಶೀತಲ್‌ ಮತ್ತು ಮಲ್ಲೇಶ ವಾಟ್ಸ್‌ಆಯಪ್‌ ಸಂಖ್ಯೆಗೆ ಬಂದಿತ್ತು. ಅದನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದು ಮಿಶ್ರತಳಿಯ ಹುಲಿ-ಚಿರತೆ ವಿಡಿಯೊ ಎಂದು ಬಿಂಬಿಸಲಾಗಿತ್ತು. ಆದರೆ, ಆ ವಿಡಿಯೊ ಅಸಲಿಯಲ್ಲ’ ಎಂದು ಬೆಳಗಾವಿ ವಲಯದ ಅರಣ್ಯ ಅಧಿಕಾರಿ ಪುರುಷೋತ್ತಮ್‌ ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ವಿಡಿಯೊ ಇವರಿಬ್ಬರೇ ಎಡಿಟ್‌ ಮಾಡಿದ್ದಲ್ಲ. ಬೇರೆಯವರಿಂದ ಇವರಿಗೆ ಸಿಕ್ಕಿದೆ. ಆ ಬಗ್ಗೆ ತನಿಖೆ ಮಾಡುತ್ತಿದ್ದು, ದಂಡ ವಿಧಿಸುತ್ತಿದ್ದೇವೆ. ವಿಡಿಯೊದ ಮೂಲ ಪತ್ತೆ ಹಚ್ಚಲು ತನಿಖೆ ಮಾಡುತ್ತೇವೆ’ ಎಂದರು.


Spread the love

About Laxminews 24x7

Check Also

ಪಟಾಕಿ ತಾಗಿದ್ದಕ್ಕೆ ಸಿಡಿಮಿಡಿ; ಮಾರಕಾಸ್ತ್ರಗಳಿಂದ ಇಬ್ಬರ ಮೇಲೆ ಹಲ್ಲೆ

Spread the loveಬೆಂಗಳೂರು: ಪಟಾಕಿ ಕಿಡಿ ತಾಗಿದ್ದಕ್ಕೆ ಮಾತಿಗೆ ಮಾತು ಬೆಳೆದು ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ ಇಬ್ಬರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ