ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy Case) ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ (Darshan) ಹಾಗೂ ಗ್ಯಾಂಗ್ ಸದ್ಯ ಹೊರಗೆ ಬರುವಂತೆ ಕಾಣಿಸುತ್ತಿಲ್ಲ. ನಟ ದರ್ಶನ್ ಅವರು ಜೈಲು ಸೇರಿ ಈಗಾಗಲೇ 2 ತಿಂಗಳು ಕಳೆದಿದೆ. ಇದೀಗ ನಟ ಅಭಿಷೇಕ್ ಅಂಬರೀಷ್ (Abhishek Ambareesh)ಅವರು ನಟ ದರ್ಶನ್ ಭೇಟಿಗೆ ಆಗಮಿಸಿದ್ದಾರೆ.
ಅಭಿಷೇಕ್ ಅಂಬರೀಷ್, ಧನ್ವೀರ್, ಚಿಕ್ಕಣ್ಣ ಅವರು ದರ್ಶನ್ ಭೇಟಿಗಾಗಿ ಜೈಲಿಗೆ ಬಂದಿದ್ದಾರೆ. ದರ್ಶನ್ ಭೇಟಿ ಮಾಡಲಿರುವ ಆಪ್ತರ ಕಾರು ಪರಪ್ಪನ ಅಗ್ರಹಾರ ಜೈಲಿಗೆ ಅವರಣಕ್ಕೆ ಹೋಗಿದೆ. ನಟ ದರ್ಶನ್ ಭೇಟಿಗೆ ಮೊದಲ ಬಾರಿಗೆ ಅಭಿಷೇಕ್ ಆಗಮಿಸಿದ್ದು ಅವರು ಇಂದು ಭೇಟಿ ಮಾಡಲಿದ್ದಾರೆ.