Breaking News

ಸಂಚಾರಿ ಕುರಿಗಾಹಿಗಳಿಗೆ ಬೇಕು ಸೌಕರ್ಯ

Spread the love

ರಾಯಬಾಗ: ರಾಜ್ಯದಲ್ಲಿ ಕುರುಬ ಸಮಾಜದ ಸಂಖ್ಯೆ 60 ಲಕ್ಷಕ್ಕೂ ಅಧಿಕವಿದೆ. ಸುಮಾರು 18 ಲಕ್ಷಕ್ಕೂ ಅಧಿಕ ಸಂಚಾರಿ ಕುರಿಗಾಹಿಗಳಿದ್ದಾರೆ. ಒಟ್ಟಾರೆ ಜನಸಂಖ್ಯೆಯ ಶೇ 30ರಷ್ಟು ಮಂದಿ ಸಂಚಾರಿ ಕುರಿಗಾಹಿಗಳೇ ಇದ್ದಾರೆ. ಆದರೆ, ಈ ಸಮಾಜಕ್ಕೆ ಸಲ್ಲಬೇಕಾದ ಕನಿಷ್ಠ ಸೌಕರ್ಯಗಳು ಇನ್ನೂ ಸಿಕ್ಕಿಲ್ಲ.

ರಾಯಬಾಗ: ಸಂಚಾರಿ ಕುರಿಗಾಹಿಗಳಿಗೆ ಬೇಕು ಸೌಕರ್ಯ

ಆದಿವಾಸಿ ಬುಡಕಟ್ಟು ಸಂಸ್ಕತಿಯನ್ನೇ ಜೀವಾಳವಾಗಿಸಿಕೊಂಡು ಕುರಿ ಸಾಕಾಣಿಕೆ, ಕಂಬಳಿ ನೇಕಾರಿಕೆ ಮೂಲಕ ಜೀವನ ಸಾಗಿಸುತ್ತಿರುವ ಹಾಲುಮತ ಕುರುಬರು ಇನ್ನೂ ಸಂಕಷ್ಟದಲ್ಲಿದ್ದಾರೆ.

ಸಂಚಾರಿ ಕುರುಬರಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಘೋಷಿಸಿದೆ. ಆದರೂ ಯಾವ ಸೌಲಭ್ಯಗಳೂ ಅವರಿಗೆ ದಕ್ಕದಂತಹ ಸ್ಥಿತಿ ನಿರ್ಮಾಣವಾಗಿದೆ. ಯೋಜನೆಗಳ ಮಾಹಿತಿ ಇಲ್ಲದಿರುವುದೇ ಇದಕ್ಕೆ ಕಾರಣ.

ಕುರಿಗಳು ಸಾವು ಕಂಡರೂ ಸೂಕ್ತ ಪರಿಹಾರ ಸಿಗುತ್ತಿಲ್ಲ. ರಸ್ತೆ ಅಪಘಾತದಲ್ಲಿ, ತೋಳ, ನರಿಗಳು ದಾಳಿಗೆ ಲೆಕ್ಕವಿಲ್ಲದಷ್ಟು ಕುರಿಗಳು ಆಹುತಿ ಆಗುತ್ತಲೇ ಇವೆ. ಹೀಗೆ ಸಂಕಷ್ಟಕ್ಕೆ ಸಿಲುಕಿದವರಿಗೆ ಮತ್ತೆ ಬದುಕು ಕಟ್ಟಿಕೊಳ್ಳುವುದು ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಅವರದು.

ಮಕ್ಕಳಿಗಿಲ್ಲ ಶಿಕ್ಷಣ ಭಾಗ್ಯ: ಸಂಚಾರಿ ಕುರುಬರು ತಮ್ಮ ಕುರಿಗಳೊಂದಿಗೆ ಸಂಚಾರ ಮಾಡುತ್ತ, ಮಕ್ಕಳೊಂದಿಗೆ ಸಂಚಾರ ಹೋಗುತ್ತಾರೆ. ವ್ಯವಸ್ಥಿತ ನೆಲೆಯಿಲ್ಲದ್ದರಿಂದ ಇವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸಂಚಾರಿ ಕುರುಬರ ಮಕ್ಕಳು ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಯಲ್ಲಿರುವ ಉದಾಹರಣೆಗಳು ಕಡಿಮೆ. ಹೆಣ್ಣು ಮಕ್ಕಳಂತೂ ಶಿಕ್ಷಣದಿಂದ ವಂಚಿತರಾಗುವುದೇ ಹೆಚ್ಚು.

ಪೌರಾಣಿಕವಾಗಿ ಹಾಲುಮತ ಎಂಬ ನಾಮಾಂಕಿತ ಹೊಂದಿದ್ದರೂ ಈ ಸಮಾಜದ ಬದುಕು ಇನ್ನೂ ಹಾಲುಮಯ ಆಗಿಲ್ಲ. ಕುರುಬರು ಕಾಡು ಪಾಲಾಗದಂತೆ ಕಾಪಾಡಬೇಕಾದುದು ಸರ್ಕಾರದ ಕರ್ತವ್ಯ ಎನ್ನುವುದು ಅವರ ಆಗ್ರಹ.


Spread the love

About Laxminews 24x7

Check Also

ರಾಯಬಾಗ: ಕೆರೆ-ಕೊಳ್ಳಗಳು ಭರ್ತಿ

Spread the love ರಾಯಬಾಗ: ಕೆರೆ-ಕೊಳ್ಳಗಳು ಭರ್ತಿಯಾದರೆ ಅಂತರ್ಜಲ ಮಟ್ಟದಲ್ಲಿ ಏರಿಕೆಯಾಗಿ ಜನರಿಗೆ ನೀರಿನ ಬವಣೆ ತಪ್ಪುತ್ತದೆ ಎಂದು ಕೆಪಿಸಿಸಿ ಪ್ರಧಾನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ