Breaking News

ಕೋಥಳಿ-ಕುಪ್ಪಾಣವಾಡಿ ಆಶ್ರಮದ ಸಾಕಾನೆ ‘ಉಷಾರಾಣಿ’ ಸಾವು

Spread the love

ಚಿಕ್ಕೋಡಿ: ತಾಲ್ಲೂಕಿನ ಕೋಥಳಿ-ಕುಪ್ಪಾನವಾಡಿಯ ಆಚಾರ್ಯ ದೇಶಭೂಷಣ ಜೈನ ಆಶ್ರಮದ ಸಾಕು ಆನೆ ಉಷಾರಾಣಿ (50) ಅನಾರೋಗ್ಯದಿಂದ ಶನಿವಾರ ಸಾವನ್ನಪ್ಪಿದ್ದು, ಆಚಾರ್ಯ ದೇಶ ಭೂಷಣ ಆಶ್ರಮ ಟ್ರಸ್ಟ್ ಹಾಗೂ ಶಾಂತಿಗಿರಿ ಟ್ರಸ್ಟ್ ವತಿಯಿಂದ ಅಂತಿಮ ನಮನಗಳನ್ನು ಸಲ್ಲಿಸಲಾಯಿತು.

ಚಿಕ್ಕೋಡಿ: ಕೋಥಳಿ-ಕುಪ್ಪಾಣವಾಡಿ ಆಶ್ರಮದ ಸಾಕಾನೆ 'ಉಷಾರಾಣಿ' ಸಾವು

ಆಶ್ರಮದ ಆವರಣದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಅನ್ವಯ ಜೈನ ಮುನಿಗಳು ಹಾಗೂ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ತಿಳಿಸಲಾಗಿದೆ.

1977ರಲ್ಲಿ 3 ವರ್ಷದ ಮರಿ ಇದ್ದಾಗ ಶಿವಮೊಗ್ಗದ ಅರಣ್ಯ ಪ್ರದೇಶದಿಂದ ತರಲಾಗಿದ್ದ ಆನೆಗೆ 1978ರಲ್ಲಿ ಉಷಾರಾಣಿ ಎಂದು ನಾಮಕರಣ ಮಾಡಲಾಗಿತ್ತು. ಕಳೆದ 4 ದಶಕಗಳಿಂದ ಉಷಾರಾಣಿ ಆನೆಯನ್ನು ತ್ರಿಲೋಕ ವಿಧಾನ ಪೂಜಾ ಕಾರ್ಯಕ್ರಮ, ಪಂಚಕಲ್ಯಾಣ ಮೆರವಣಿಗೆ, ವಿವಿಧ ಜಾತ್ರಾ ಮಹೋತ್ಸವಗಳ ಮೆರವಣಿಗೆಯಲ್ಲಿ ಬಳಸಲಾಗುತ್ತಿತ್ತು. ರಾಜ್ಯದ ಬೆಳಗಾವಿ, ಮಹಾರಾಷ್ಟ್ರದ ಕೊಲ್ಹಾಪುರ, ಸಾಂಗ್ಲಿ ಜಿಲ್ಲೆ ಸೇರಿದಂತೆ ಹಲವು ಕಡೆಗೆ ಉಷಾರಾಣಿ ಆನೆಯು ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು.

ಅನಾರೋಗ್ಯ ಪೀಡಿತವಾಗಿ ಸಾವನ್ನಪ್ಪಿದ ಉಷಾರಾಣಿ ಆನೆಯ ಮರಣೋತ್ತರ ಪರೀಕ್ಷೆಯ ಬಳಿಕ ಅರಣ್ಯ ಇಲಾಖೆಯ ನಿಯಮಾವಳಿಯಂತೆ ಅಗ್ನಿ ಸ್ಪರ್ಶದ ಮೂಲಕ ಅಂತ್ಯಕ್ರಿಯೆನ್ನು ಆಶ್ರಮದ ಆವರಣದಲ್ಲಿ ರಾತ್ರಿ 8 ಗಂಟೆಗೆ ನೆರವೇರಿಸಲಾಯಿತು


Spread the love

About Laxminews 24x7

Check Also

ಚೆನ್ನಮ್ಮ ವೃತ್ತದಿಂದ ಡಿಸಿ ಕಚೇರಿ ವರೆಗೂ ಪ್ರತಿಭಟನಾ ರ್ಯಾಲಿ. ಧರ್ಮಸ್ಥಳದ ಭಕ್ತಾಭಿಮಾನಿಗಳ ವೇದಿಕೆಯಿಂದ ಹೋರಾಟ

Spread the love ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ಷಡ್ಯಂತ್ರ, ಅಪಪ್ರಚಾರ ವಿಚಾರ ಕುಂದಾನಗರಿ ಬೆಳಗಾವಿಯಲ್ಲಿ ಧರ್ಮಸ್ಥಳ ಭಕ್ತರಿಂದ ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ