ರಬಕವಿ ಬನಹಟ್ಟಿ: ‘ಧರ್ಮದ ಮಾರ್ಗಕ್ಕೆ ತೆಗೆದುಕೊಂಡು ಹೋಗುವ, ಮನಸ್ಸಿಗೆ ಶಾಂತಿ ನೀಡುವ, ಮನೋವಿಕಾಸ, ಆತ್ಮವಿಕಾಸದ ಮಾತುಗಳನ್ನು ಕೇಳುವುದು, ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರ ಕುರಿತು ಕೇಳುವುದೇ ಶ‍್ರಾವಣ ಮಾಸದ ಮಹತ್ವ’ ಎಂದು ರಬಕವಿಯ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಅವರು ಇಲ್ಲಿನ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಶ್ರಾವಣ ಮಾಸದ ಅಂಗವಾಗಿ ನವಲಗುಂದದ ಅಜಾತ ನಾಗಲಿಂಗ ಶಿವಯೋಗಿಗಳ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಾತ್ಮರ ಚರಿತ್ರೆ ಕೇಳುವುದರಿಂದ ಪುಣ್ಯ ಮತ್ತು ಮೋಕ್ಷ ಪಾಪ್ತಿಯಾಗುತ್ತದೆ’ ಎಂದರು.
Laxmi News 24×7