ಬಸ್ ನಿಲ್ಲಿಸದಿದ್ದಕ್ಕೆ ಕಂಡಕ್ಟರ್‌ ಮೇಲೆ ಹಾವು ಎಸೆದ ಮಹಿಳೆ

Spread the love

ಹೈದರಾಬಾದ್: ಬಸ್​​ ನಿಲ್ಲಿಸದಿದ್ದಕ್ಕೆ ಮಹಿಳೆಯೊಬ್ಬಳು ಬಾಟಲಿಯಿಂದ ಬಸ್​​ ಗಾಜು ಹೊಡೆದು ಬಸ್ ಕಂಡಕ್ಟರ್ ಮೇಲೆ ಹಾವನ್ನು ಎಸೆದ ಘಟನೆ ಹೈದರಾಬಾದ್​​ನ ವಿದ್ಯಾನಗರದಲ್ಲಿ ನಡೆದಿದೆ. ಮಹಿಳೆ ಕುಡಿದ ಮತ್ತಿನಲ್ಲಿದ್ದ ಈ ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದು, ಆಕೆಯನ್ನು ಬಂಧಿಸಿ ಕರೆದೊಯ್ಯಲಾಗಿದೆ.

ಗುರುವಾರ ಸಂಜೆ ವಿದ್ಯಾನಗರದಲ್ಲಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (ಟಿಜಿಎಸ್‌ಆರ್‌ಟಿಸಿ) ಸೇರಿದ ಬಸ್‌ಗೆ ಮಹಿಳೆ ಮದ್ಯದ ಬಾಟಲಿಯನ್ನು ಎಸೆದಿದ್ದಾಳೆ. ಬಳಿಕ ಕಂಡಕ್ಟರ್ ಮಹಿಳೆಯನ್ನು ಪ್ರಶ್ನಿಸಿದಾಗ, ಆಕೆ ತನ್ನ ಬ್ಯಾಗ್‌ನಿಂದ ಹಾವನ್ನು ಹೊರತೆಗೆದು ಆಕೆಯ ಮೇಲೆ ಎಸೆದಿದ್ದಾಳೆ. ಘಟನೆಯ ಕುರಿತು ನಲ್ಲಕುಂಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಟಿಜಿಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾನಗರ ಸಿಗ್ನಲ್‌ನಲ್ಲಿ ಫ್ರೀ ಲೆಫ್ಟ್‌ನಲ್ಲಿ ಆರ್‌ಟಿಸಿ ಬಸ್ ನಿಲ್ದಾಣವಿಲ್ಲ. ಆದ್ದರಿಂದ ಚಾಲಕ ಬಸ್​​ ನಿಲ್ಲಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ದೂರಿನ ಆಧಾರದ ಮೇಲೆ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿ ಆಕೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಹಿಳೆ ಕುಡಿದ ಮತ್ತಿನಲ್ಲಿದ್ದಳು, ಬಸ್ ಚಾಲಕ ವಾಹನ ನಿಲ್ಲಿಸದಿದ್ದಾಗ ಕಂಡಕ್ಟರ್ ಮೇಲೆ ಹಾವನ್ನು ಎಸೆದಿದ್ದಾಳೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಭೇಟಿಯಾದ ಹೆಚ್‌ಡಿಕೆ

Spread the loveನವದೆಹಲಿ: ಉಕ್ಕು ಸಚಿವಾಲಯದ ವಿವಿಧ ಅಭಿವೃದ್ಧಿ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ