Breaking News

: ಕಾರ್ಮಿಕನ ಶವವನ್ನು ಕೈಚೀಲದಲ್ಲಿ ಹಾಕಿ ಕೊಟ್ಟ ಜಿಲ್ಲಾಡಳಿತ

Spread the love

ಬೆಳಗಾವಿ: ತಾಲ್ಲೂಕಿನ ನಾವಗೆ ಗ್ರಾಮದ ಕಾರ್ಖಾನೆಯ ಅಗ್ನಿ ಅವಘಡದಲ್ಲಿ ಮೃತಪಟ್ಟ ಕಾರ್ಮಿಕ ಯಲ್ಲಪ್ಪ ಸಣ್ಣಗೌಡ ಗುಂಡ್ಯಾಗೋಳ (20) ಅವರ ದೇಹದ ಅವಶೇಷಗಳನ್ನು, ಅಧಿಕಾರಿಗಳು ಪ್ಲಾಸ್ಟಿಕ್‌ ಚೀಲದಲ್ಲಿ ಹಾಕಿ ತಂದೆಯ ಕೈಗೆ ಕೊಟ್ಟು ಕಳುಹಿಸಿದರು.

ಬೆಂಕಿ ಅವಘಡ: ಕಾರ್ಮಿಕನ ಶವವನ್ನು ಕೈಚೀಲದಲ್ಲಿ ಹಾಕಿ ಕೊಟ್ಟ ಜಿಲ್ಲಾಡಳಿತ

ಸುಟ್ಟುಹೋದ ಮಗನ ದೇಹದ ಅಲ್ಪಸ್ವಲ್ಪ ಅಂಗಾಂಗಗಳನ್ನು ತಂದೆ ಸಣ್ಣಗೌಡ ಅವರು, ಸಂತೆಗೆ ಬಳಸುತ್ತಿದ್ದ ಕೈಚೀಲದಲ್ಲಿ ಹಾಕಿಕೊಂಡು ಮನೆ ಕಡೆಗೆ ಹೊರಟರು.

ದಾರಿಯುದ್ದಕ್ಕೂ ಇನ್ನಿಲ್ಲದಂತೆ ದುಃಖಿಸುತ್ತಿದ್ದ ಅವರ ಪರಿಸ್ಥಿತಿಗೆ ಮರುಗದವರೇ ಇಲ್ಲ.

ಕಾರ್ಖಾನೆಯ ಲಿಫ್ಟ್‌ನಲ್ಲೇ ಸಿಕ್ಕಿ ಸತ್ತುಹೋದ ಯುವಕನ ಶವಕ್ಕೂ ಜಿಲ್ಲಾಡಳಿತ ಕನಿಷ್ಠ ಗೌರವ ನೀಡಲಿಲ್ಲ. ಸ್ಥಳದಲ್ಲಿ ಆಂಬುಲೆನ್ಸ್‌ಗಳಿದ್ದರೂ ಕೈಚೀಲದಲ್ಲಿ ದೇಹದ ಅವಶೇಷಗಳನ್ನು ಹಾಕಿ ಕೊಟ್ಟಿತು.

ಸಣ್ಣಗೌಡ ಅವರ ನಾಲ್ವರು ಮಕ್ಕಳಲ್ಲಿ ಯಲ್ಲಪ್ಪ ಒಬ್ಬನೇ ಗಂಡುಮಗ. ಉಳಿದ ಮೂವರು ಹೆಣ್ಣುಮಕ್ಕಳಿದ್ದಾರೆ. ಪಿಯುಸಿ ಮುಗಿದ ಯಲ್ಲಪ್ಪ ತಂದೆಯ ಕಷ್ಟಕ್ಕೆ ನೆರವಾಗಲು ಓದನ್ನು ಅರ್ಧಕ್ಕೆ ನಿಲ್ಲಿಸಿ, ಕಾರ್ಖಾನೆಗೆ ಕೆಲಸಕ್ಕೆ ಸೇರಿದ್ದ. ಕೆಲಸಕ್ಕೆ ಸೇರಿ ಕೇವಲ ಮೂರು ತಿಂಗಳಾಗಿತ್ತು. ತಿಂಗಳಿಗೆ ₹12 ಸಾವಿರದಂತೆ ಎರಡು ಸಂಬಳ ಮಾತ್ರ ತೆಗೆದುಕೊಂಡಿದ್ದ. ಬಿಡಿಗಾಸಿಗೆ ದುಡಿಯಲು ಹೋಗಿ ಮಗ ಜೀವವನ್ನೇ ಕಳೆದುಕೊಂಡ ಎಂದು ತಂದೆ- ತಾಯಿ ಗೋಳಾಡುತ್ತಿದ್ದ ದೃಶ್ಯ ಮನ ಕಲುಕಿತು.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ