ಮಂಡ್ಯ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಲಕ್ಷ್ಮೀ ವಿಲಾಸ್ ಬ್ಯಾಂಕ್‌ನಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆಸಿದ್ದು ಅದರ ಬಗ್ಗೆ ಮಾಹಿತಿ ಬಿಚ್ಚಿಡಬೇಕೇ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಮದ್ದೂರಿನ ಜನಾಂದೋಲನ ಸಮಾವೇಶದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರ ವಿರುದ್ಧ ವಾಗ್ಧಾಳಿ ಮುಂದುವರಿಸಿದ ಅವರು, “ವಿಜಯೇಂದ್ರ, ನಿನ್ನ ತಂದೆ ನಾಲ್ಕು ಬಾರಿ ಸಿಎಂ ಆಗಿ ರಾಜೀನಾಮೆ ನೀಡಿದ್ದು ಯಾಕೆ?
ಸುಪ್ರೀಂಕೋರ್ಟ್ ಏನು ಹೇಳಿದೆ? ನೀನು ದುಬಾೖಗೆ ವಿಶೇಷ ವಿಮಾನದಲ್ಲಿ ಹೋಗಿ ಖಾತೆ ತೆರೆದೆಯಲ್ಲ, ನಿಮ್ಮ ಕುಟುಂಬದವರಿಗೆ ಏನು ಮಾಡಿದೆ. ಇದರ ಬಗ್ಗೆ ಯಾಕೆ ಇನ್ನೂ ತನಿಖೆ ಮಾಡಿಸುತ್ತಿಲ್ಲ. ನಿನ್ನ ಬಗ್ಗೆ ಬಿಚ್ಚಿ ಹೇಳಲೇ? ಈಗ ಬೇಡ, ಸದನದಲ್ಲಿ ಮಾತನಾಡುತ್ತೇನೆ.
ಕುಮಾರಸ್ವಾಮಿ ನನ್ನ ಬಗ್ಗೆ ಮಾತನಾಡಲಿ. ನಾನೂ ಸಿದ್ಧನಿದ್ದೇನೆ. ಮುಡಾದಲ್ಲಿ ಪಟ್ಟಿ ಇದೆಯಲ್ಲ, ಅದರ ಬಗ್ಗೆ ಉತ್ತರ ಕೊಡು. ಕುಮಾರಸ್ವಾಮಿ, ನಿನ್ನ ಸಹೋದರನ ಆಸ್ತಿ ಬಗ್ಗೆ ತಿಳಿಸಪ್ಪ, ಅದಕ್ಕೆ ನೀನೇ ವೇದಿಕೆ ಸಿದ್ಧತೆ ಮಾಡು, ನಾನು ಬರುತ್ತೇನೆ’ ಎಂದು ಏಕವಚನದಲ್ಲಿ ಸವಾಲು ಹಾಕಿದರು