ಬೆಂಗಳೂರು: ಕೊಡಗು- ಮೈಸೂರು ಸಂಸದ ರಾಗಿದ್ದ ಪ್ರತಾಪ್ ಸಿಂಹ ರಾಜ್ಯ ರಾಜಕಾರಣಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದು, ಮುಂದಿನ ದಿನ ಗಳಲ್ಲಿ ಅಧಿಕೃತವಾಗಿ ವಿಧಾನಸಭೆ ಪ್ರವೇಶಿಸುವುದಾಗಿಯೂ ತಿಳಿಸಿದ್ದಾರೆ.
“ಉದಯವಾಣಿ’ಯ “ನೇರಾನೇರ’ ಸಂದರ್ಶನದ ವೇಳೆ ಈ ಕುರಿತು ಮುಕ್ತವಾಗಿ ಮಾತ ನಾಡಿರುವ ಪ್ರತಾಪ್, “ನಾನೀಗ ಸದ್ಯಕ್ಕೆ ವಿಧಾನಸೌಧದಲ್ಲಿ ಇಲ್ಲದಿರಬಹುದು.
ಆದರೆ ರಾಜ್ಯ ರಾಜ ಕಾರಣದಲ್ಲೇ ಇದ್ದೇನೆ’ ಎಂದಿದ್ದಾರೆ.
“ಇತ್ತೀಚೆಗೆ ರಾಜ್ಯದ ವಿಷಯಗಳ ಬಗ್ಗೆ ತಾರ್ಕಿಕವಾಗಿ ಹಾಗೂ ಪ್ರಬಲವಾಗಿ ಮಾತ ನಾಡುತ್ತಿದ್ದೇನೆ. ಮೊದಲು ರಾಜ್ಯದ ಬಗ್ಗೆ ನಾನು ಮಾತನಾಡುತ್ತಿರಲಿಲ್ಲ. ಈಗಾಗಲೇ ನಾನು ರಾಜ್ಯ ರಾಜಕಾರಣದಲ್ಲಿ ಇದ್ದೇನೆ. ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೆ ಹೋಗುತ್ತೇನೆ’ ಎಂದರು.
ಹಳೇ ಮೈಸೂರು ಭಾಗದಿಂದ ಸ್ಪರ್ಧೆ
ತಯಾರಿ ಎಂದೆಲ್ಲ ಏನೂ ಮಾಡಿ ಕೊಂಡಿಲ್ಲ. ಕ್ಷೇತ್ರ ಯಾವುದು ಎಂಬುದನ್ನು ತಾಯಿ ಚಾಮುಂಡೇಶ್ವರಿ ನಿರ್ಧರಿಸುತ್ತಾಳೆ. ಮುಂದೆ ಕ್ಷೇತ್ರಗಳ ಪುನರ್ವಿಂಗಡಣೆ ಆಗುವು ದಿದೆ. ರಾಜ್ಯದಲ್ಲಿ ಈಗಿರುವುದರಿಂದ 70-80 ಸ್ಥಾನಗಳು ಹೆಚ್ಚಾಗಲಿವೆ. ಶೇ. 33ರ ಮೀಸಲಾತಿ ಅನ್ವಯ ಆಗಲಿದೆ. ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್‌ಗೆ ರಾಜ್ಯ ಪಾಲರು ಅನುಮತಿ ಕೊಟ್ಟು ಈ ಸರ ಕಾರ ಪತನಗೊಂಡು ಚುನಾವಣೆ ನಡೆದರೆ ಹಳೇ ಮೈಸೂರಿನಲ್ಲಂತೂ ನಾನಿರುತ್ತೇನೆ ಎಂಬ ಸುಳಿವು ನೀಡಿದರು.
ಕೊಡಗು-ಮೈಸೂರು ಲೋಕಸಭಾ ಕ್ಷೇತ್ರ ದಿಂದ ನಾನು ಸ್ಪರ್ಧಿಸಬೇಕೆಂಬ ನಿರ್ಣಯ ವನ್ನು ಕೈಗೊಂಡು ನನಗೆ ಆಶೀರ್ವಾದ ಮಾಡಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರು. ಅವರ ಮಾರ್ಗ ದರ್ಶನ ದಂತೆಯೇ ಸಂಸದನಾದೆ. ಆರೆಸ್ಸೆಸ್ ಇಲ್ಲದೆ ಬಿಜೆಪಿ ಏನೇನೂ ಅಲ್ಲ. ಬಿಜೆಪಿಯು ಆರೆಸ್ಸೆಸ್‌ನ ಹೊಕ್ಕುಳಬಳ್ಳಿ ಇದ್ದಂತೆ. ಸೈದ್ಧಾಂತಿಕ ಬುನಾದಿ ಹಾಕಿಕೊಟ್ಟಿರುವ ಆರೆಸ್ಸೆಸ್ ಬಿಜೆಪಿಯ ಕಿವಿಹಿಂಡಿ ಸರಿದಾರಿಗೆ ತರುವ ಶಕ್ತಿ ಹೊಂದಿದೆ. ಅಂದು ಲೋಕಸಭೆಗೆ ನನ್ನನ್ನು ಕಳುಹಿಸಿದವರೇ ಮುಂದೆ ವಿಧಾನಸಭೆಗೂ ಕಳುಹಿಸುವ ವಿಶ್ವಾಸವಿದೆ ಎಂದು ತಿಳಿಸಿದರು.
ಮುಂಬಾಗಿಲ ಮೂಲಕವೇ ಪ್ರವೇಶ
ಕೊಡಗು-ಮೈಸೂರು ಕ್ಷೇತ್ರದ ಟಿಕೆಟ್ ಬೇರೆಯವರಿಗೆ ಸಿಕ್ಕಿದೆ. ಅಲ್ಲಿ ಬೇಡ ಎಂದ ಮೇಲೆ ಇಲ್ಲೇ ಇರ ಬೇಕು ತಾನೆ? ಲೋಕಸಭೆಗೆ ಮುಂಬಾಗಿಲಿ ನಿಂದಲೇ ಹೋಗಿದ್ದೆ. ಹಿಂಬಾಗಿಲಿನ ಪ್ರಶ್ನೆ ಇಲ್ಲ. ಮುಂಬಾಗಿಲಿನ ಮೂಲಕ ವಿಧಾನಸಭೆ ಪ್ರವೇಶ ಮಾಡುತ್ತೇನೆ ಎಂದರು.