ಬೆಳಗಾವಿ : ಈತ ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ತಡೆದು ಬೆಂಡೆತ್ತುವ ಪವಿತ್ರ ಖಾಕಿ ತೊಟ್ಟ ಪೊಲೀಸಪ್ಪ. ಆದರೆ ಕಟ್ಕೊಂಡ ಹೆಂಡ್ತಿಯನ್ನು ಅಮಾನುಷವಾಗಿ ಹೊಡೆದು ಕ್ರೌರ್ಯ ಮೆರೆದಿದ್ದಾನೆ. ಕಳೆದ ಎಂಟು ವರ್ಷಗಳಿಂದಲೂ ಇತನ ಮನಸ್ಥಿತಿ ಇನ್ನೂ ಮುಂದುವರೆದಿದ್ದು ವಿಪರ್ಯಾಸ.
ಪಿಎಸ್‌ಐನಿಂದ ಹೆಂಡತಿ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ತೀವ್ರ ಹಲ್ಲೆಗೊಳಗಾದ ಪತ್ನಿ ಬಿಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲು ಮಾಡಿದ್ದಾರೆ.
ಪಿಎಸ್‌ಐ ಉದ್ದಪ್ಪ ಕಟ್ಟಿಕಾರ್ ಎಂಬಾತ ಪತ್ನಿಗೆ ಮನಬಂದಂತೆ ಥಳಿಸಿದ್ದಾನೆ. ಪ್ರತಿಮಾ ಉದ್ದಪ್ಪ ಕಟ್ಟಿಕಾರ್ ಹಲ್ಲೆಗೊಳಗಾದವರು. ಪತಿ ಉದ್ದಪ್ಪ ಬೇರೊಬ್ಬ ಯುವತಿಯ ಜತೆಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಹೀಗಾಗಿ ಪತ್ನಿ ಪ್ರತಿಮಾ ಬೇರೊಬ್ಬ ಯುವತಿಯ ಜತೆಗೆ ಅಕ್ರಮ ಸಂಬಂಧ ಇರುವುದನ್ನು ಪ್ರಶ್ನಿಸಿದ್ದಾರೆ.
ಮಕ್ಕಳ ಆಧಾರ ಕಾರ್ಡ್, ರೇಷನ್ ಕಾರ್ಡ್ ಕೇಳಿದ್ದಕ್ಕೆ ಮಕ್ಕಳೆದರೇ ಉದ್ದಪ್ಪ, ಪ್ರತಿಮಾ ಮೇಲೆ ಹಲ್ಲೆ ನಡೆಸಿದ್ದಾನೆ. ಈ ದಂಪತಿ ರಾಮತೀರ್ಥ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಪತ್ನಿ ಪ್ರತಿಮಾ ಕಣ್ಣು, ಕುತ್ತಿಗೆ ಭಾಗಕ್ಕೆ ತೀವ್ರವಾಗಿ ಹಲ್ಲೆ ಆಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.