Breaking News

ಪುಣೆ ವಿವಿಧೆಡೆ ಜಲಾವೃತ

Spread the love

ಮುಂಬಯಿ: ಮಹಾರಾಷ್ಟ್ರದ ಖಡಕ್‌ವಾಸ್ಲಾ ಅಣೆ ಕಟ್ಟನ್ನು ತೆರೆದಿರುವ ಕಾರಣ ಪುಣೆಯ ಹಲವು ನಗರ ಗಳು ಜಲಾವೃತಗೊಂಡಿವೆ. ವಿವಿಧೆಡೆ ಮನೆಗಳಿಗೆ ನೀರು ನುಗ್ಗಿದೆ. ಮಳೆ ಹೆಚ್ಚಿರುವ ಕಾರಣ ಪರಿಸ್ಥಿತಿ ಕೈಮೀರುತ್ತಿದೆ ಈ ಹಿನ್ನೆಲೆಯಲ್ಲಿ ಪುಣೆಯ ಏಕ್ತಾ ನಗರ ಸೇರಿ ಹಲವೆಡೆ ರಕ್ಷಣ ಕಾರ್ಯಾಚರಣೆಗಾಗಿ ಸೇನಾ ಸಿಬಂದಿಯನ್ನು ನಿಯೋಜಿಸಲಾಗಿದೆ.

Dam water release: ಪುಣೆ ವಿವಿಧೆಡೆ ಜಲಾವೃತ

ಏಕ್ತಾ ನಗರದ ಹಲವು ನಿವಾಸಿಗಳನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಅಣೆಕಟ್ಟಿನಿಂದ ರವಿವಾರ 35,000 ಕ್ಯುಸೆಕ್‌ ನೀರು ಬಿಡುಗಡೆ ಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಮನವಿ ಮೇರೆಗೆ ಏಕ್ತ ನಗರದ ಸಿನ್ಹಾಗಢ ರಸ್ತೆಯಲ್ಲಿರುವ ದ್ವಾರಕ ಸೊಸೈಟಿಯಲ್ಲಿ ಸೇನಾ ಸಿಬಂದಿಯನ್ನು ನಿಯೋಜಿಸ ಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ರಾಜ್ಯದಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಆಪರೇಷನ್ ಆರಂಭ

Spread the loveಬೆಂಗಳೂರು: ಬಾಂಗ್ಲಾ ದೇಶೀಯರು ಸೇರಿದಂತೆ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರು ವವರನ್ನು ಪತ್ತೆ ಹಚ್ಚಿ, ಗಡೀಪಾರು ಮಾಡುವ ಕಾರ್ಯಾಚರಣೆಯನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ