ರಾಯಬಾಗ: ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲ್ಲಿಲ್ಲ ಎಂಬಂತೆ ಜಿ.ಎಲ್.ಬಿ.ಸಿ. ಅನುದಾನದಲ್ಲಿ 1.60 ಕೋಟಿ ರೂ. ವೆಚ್ಚದಲ್ಲಿ 33 ಚಿಕ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಆಗಿದ್ದು, ಗುತ್ತಿದಾರ ಸಹ ಕೆಲಸ ಪ್ರಾರಂಭಿಸಿದ್ದಾರೆ.
ಆದರೆ ಕೆಲ ರೈತರು ಇದಕ್ಕೆ ತಕರಾರು ಮಾಡಿದ್ದರಿಂದ, ಸರ್ವೆ ಮಾಡಿ ನಿಮ್ಮ ರಸ್ತೆ ಎಲ್ಲಿ ಬರುತ್ತದೆ ಅಲ್ಲಿ ತೆಗೆದುಕೊಳ್ಳಿ ಎಂದಿದ್ದಾರೆ.
ಅದರಂತೆ ಸರ್ವೆ ಇಲಾಖೆಯ ಅಧಿಕಾರಿಗಳಿಗೆ ಹಾಗೂ ತಾಲೂಕು ದಂಡಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿಕೊಂಡರೂ ಕೂಡ ಇಲ್ಲಿಯವರೆಗೂ ಯಾರು ಇತ್ತ ಕಡೆ ಯಾವ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ಅಲ್ಲಿನ ಸಾರ್ವಜನಿಕರು ತಮ್ಮ-ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.