ಬಾಲ್ಯದಲ್ಲೇ ಅಣ್ಣ ತಮ್ಮಂದಿರ ಜತೆ ಉಂಡು ಬಿಡಿ.
ಮುಂದೆ ಆ ಅವಕಾಶ ಮತ್ತೆ ಸಿಗಲಿಕ್ಕಿಲ್ಲ.
ಹೆಂಡತಿ ಬರುವ ಮುಂಚೆಯೇ ತಾಯಿಯ ಸುಖ ಅನುಭವಿಸಿ ಬಿಡಿ.
ಏಕೆಂದರೆ ಮುಂದೆ ಅದು ದೊರೆಯಲಿಕ್ಕಿಲ್ಲ.
ಮದುವೆಯಲ್ಲೇ ಸತಿ ಸೌಂದರ್ಯವನ್ನು ನೋಡಿ ಬಿಡಿ.
ಏಕೆಂದರೆ ಮುಂದೆ ಅದು ಉಳಿಯುವ ಗ್ಯಾರಂಟಿ ಇಲ್ಲ.
ಚಿಕ್ಕವರಿದ್ದಾಗಲೇ ಮಕ್ಕಳ ಜತೆ ಮಾತಾಡಿ ಬಿಡಿ.
ಏಕೆಂದರೆ ಮುಂದೆ ನಿಮ್ಮೊಂದಿಗೆ ಮಾತನಾಡಲು ಅವರಿಗೆ ಸಮಯ ಇರಲಿಕ್ಕಿಲ್ಲ.
ಈ ರೀತಿ ಆಗುತ್ತಿರುವುದಕ್ಕೆ ಕಾರಣ ಕಾಲ ಚಕ್ರದಲ್ಲಿ ಹೆಜ್ಜೆ ಹೆಜ್ಜೆಗೂ ಆಗುತ್ತಿರುವ ಬದಲಾವಣೆಗಳು.
ಒಂದನ್ನು ಪಡೆಯಲು ಹೋಗಿ ಮತ್ತೊಂದನ್ನು ಕಳೆದು ಕೊಳ್ಳುವುದಕ್ಕೆ ಇವುಗಳೇ ನಮ್ಮ ಕಣ್ಣು ಮುಂದೆ ಇರುವ ಒಳ್ಳೆಯ ಉದಾಹರಣೆಗಳು.
– ಡಾ ಸುಧಾಮೂರ್ತಿ
………………………………..
ಮನದ ಅನ್ವೇಷಣೆ