ಬೆಳಗಾವಿ: ರಾಯಬಾಗ ತಾಲ್ಲೂಕಿನ ಕುಡಚಿ ಪಟ್ಟಣದ ಬಳಿ ಗುರುವಾರ, ಎನ್‌ಡಿಆರ್‌ಎಫ್ ತಂಡ ಬೋಟ್ ಕೃಷ್ಣಾ ನದಿ ಸೆಳವಿಗೆ ಸಿಕ್ಕು ಪಲ್ಟಿಯಾಯಿತು. ಎಲ್ಲ ಸಿಬ್ಬಂದಿ ಲೈಫ್ ಜಾಕೆಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾದರು.
ಇಲ್ಲಿರುವ ಜಾಕ್ವೆಲ್ ಕೃಷ್ಣಾ ನದಿ ನೀರಿನಲ್ಲಿ ಮುಳುಗಿದೆ.
ಇದರಿಂದ ಪಟ್ಟಣಕ್ಕೆ ನೀರು ಸರಬರಾಜು ಸ್ಥಗಿತಗೊಂಡಿದೆ. ಈ ಜ್ವಾಕ್ವೆಲ್ ದುರಸ್ತಿಗೆ ವಾಟರ್ ಮ್ಯಾನ್, ಲೈನ್ ಮ್ಯಾನ್ ಹಾಗೂ ಎನ್‌ಡಿಆರ್‌ಎಫ್ ತಂಡದವರು ಬೋಟ್ ಮೂಲಕ ತೆರಳಿದ್ದರು. ನೀರಿನ ರಭಸಕ್ಕೆ ಬೋಟ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಯಿತು. ಇದರಿಂದ ಕೆಲ ಕಾಲ ಆತಂಕದ ವಾತಾವರಣ ಮನೆ ಮಾಡಿತ್ತು.
ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮದ ಹೊರವಲಯದಲ್ಲಿ ಕೃಷ್ಣಾ ನದಿ ನೀರಿನಿಂದ ಸ್ಮಶಾನ ಭೂಮಿ ಆವೃತಗೊಂಡಿದೆ – ಪ್ರಜಾವಾಣಿ ಚಿತ್ರ: ಚಂದ್ರಶೇಖರ ಎಸ್. ಚಿನಕೇಕರ