ರೈಲಿಗೆ ತಲೆಕೊಟ್ಟು ಅಣ್ಣ ತಂಗಿ ಆತ್ಮಹತ್ಯೆ

Spread the love

ರೈಲಿಗೆ ತಲೆಕೊಟ್ಟು ಅಣ್ಣ ತಂಗಿ ಆತ್ಮಹತ್ಯೆ

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದಲ್ಲಿ ರೈಲ್ವೆ ಹಳಿಗೆ ಅಣ್ಣ ತಂಗಿ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ (ಆ.02)ಬೆಳಗ್ಗೆ ನಡೆದಿದೆ.

ರೈಲಿಗೆ ತಲೆಕೊಟ್ಟು ಅಣ್ಣ ತಂಗಿ ಆತ್ಮಹತ್ಯೆ: 4 ತಿಂಗಳ ಹಿಂದೆಯಷ್ಟೇ ತಾಯಿ ಮೃತಪಟ್ಟಿದ್ದರು

ಶಿಡ್ಲಘಟ್ಟ ಟೌನ್ ನ ಪ್ರೇಮನಗರದ ನಿವಾಸಿಗಳಾದ ಶಿಲ್ಪ ಅಲಿಯಾಸ್ ನವ್ಯ (23) ಹಾಗೂ ಪ್ರಭು (20) ಎನ್ನಲಾಗಿದ್ದು ಬಲಜಿಗ ಜನಾಂಗದವರು ಎನ್ನಲಾಗಿದ್ದು, ಬೆಂಗಳೂರಿನಿಂದ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಮಾರ್ಗವಾಗಿ ಕೋಲಾರಕ್ಕೆ ತೆರಳುವ ರೈಲಿಗೆ ರಾತ್ರಿ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಬೇಕಾಗಿದೆ.

ತಾಯಿ ಲಲಿತಮ್ಮ ನಾಲ್ಕು ತಿಂಗಳ ಹಿಂದೆಯಷ್ಟೇ ಸಾವನ್ನಪ್ಪಿದ್ದು ಮಕ್ಕಳಿಗೆ ತಾಯಿಯೇ ಎಲ್ಲಾ ಆಗಿದ್ದಳು, ಇದೇ ಕಾರಣಕ್ಕೆ ಮಕ್ಕಳು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ. ತನಿಖೆಯಿಂದ ನಿಜಾಂಶ ಗೊತ್ತಾಗಬೇಕಿದೆ.


Spread the love

About Laxminews 24x7

Check Also

ರಾಜ್ಯದಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಆಪರೇಷನ್ ಆರಂಭ

Spread the loveಬೆಂಗಳೂರು: ಬಾಂಗ್ಲಾ ದೇಶೀಯರು ಸೇರಿದಂತೆ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರು ವವರನ್ನು ಪತ್ತೆ ಹಚ್ಚಿ, ಗಡೀಪಾರು ಮಾಡುವ ಕಾರ್ಯಾಚರಣೆಯನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ