Breaking News

ಸೋರುತ್ತಿರುವ ದಾಂಡೇಲಿಯ ಸಾರಿಗೆ ಬಸ್ ನಿಲ್ದಾಣ:

Spread the love

ದಾಂಡೇಲಿ : ಪ್ರವಾಸೋದ್ಯಮ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಚಾಪನ್ನ ಮೂಡಿಸುತ್ತಿರುವ ದಾಂಡೇಲಿ ನಗರದ ಕೇಂದ್ರ ಬಸ್ ನಿಲ್ದಾಣ ಮಾತ್ರ ಸೋರುವ ಮೂಲಕ ಎಲ್ಲರ ಗಮನ ಸೆಳೆಯತೊಡಗಿದೆ.

ಸಾರಿಗೆ ಬಸ್ ನಿಲ್ದಾಣದ ಒಳಗಡೆ ಛತ್ರಿ‌ ಬಿಡಿಸಿ ಕುಳಿತುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಸಂಚಾರಿ ನಿಯಂತ್ರಕರ ಕೊಠಡಿಯಲ್ಲಂತೂ ನೀರು ತುಂಬಿಕೊಂಡಿರುತ್ತದೆ. ನಿಲ್ದಾಣದಲ್ಲಿರುವ ವಿಶ್ರಾಂತಿ ಕೊಠಡಿಯಲ್ಲಂತೂ ನೀರು ನಿಂತಿರುವುದರಿಂದ ವಿಶ್ರಾಂತಿ ಮಾಡಲು ಹೋದವರಿಗೆ ವಾಂತಿ ಬರುವಂತಹ ಸ್ಥಿತಿಯಿದೆ.

Dandeli: ಸೋರುತ್ತಿರುವ ದಾಂಡೇಲಿಯ ಸಾರಿಗೆ ಬಸ್ ನಿಲ್ದಾಣ: ದುರಸ್ತಿಗೆ ಸಾರ್ವಜನಿಕರಿಂದ ಮನವಿ

ಬಸ್ ನಿಲ್ದಾಣದ ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿವೆ. ಪ್ರಯಾಣಿಕರು ಮಾತ್ರವಲ್ಲದೆ ಸಿಬ್ಬಂದಿಗಳು ಕೂಡ ಭಯಪಟ್ಟುಕೊಂಡೆ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಇಲ್ಲಿದೆ.

ಈ ನಿಟ್ಟಿನಲ್ಲಿ ಸೋರುತ್ತಿರುವ ಈ ಬಸ್ ನಿಲ್ದಾಣವನ್ನು ದುರಸ್ತಿಗೊಳಿಸಿ ಹೊಸ ಕಾಯಕಲ್ಪವನ್ನು ನೀಡಬೇಕೆಂದು ಸಾರ್ವಜನಿಕರು ಮಾಧ್ಯಮದ ಮೂಲಕ ಮನವಿಯನ್ನು ಮಾಡಿದ್ದಾರೆ.


Spread the love

About Laxminews 24x7

Check Also

ನಮಗೆ ಇ.ಡಿ ಸಮನ್ಸ್ ಮೂಲಕ ಕಿರುಕುಳ ನೀಡಲಾಗುತ್ತಿದೆ: ಡಿಸಿಎಂ ಡಿ.ಕೆ.ಶಿವಕುಮಾರ್

Spread the loveಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಹಾಗೂ ಯಂಗ್ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಜಾರಿ ನಿರ್ದೇಶನಾಲಯ (ಇ.ಡಿ) ಸಮನ್ಸ್ ನೀಡಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ