ವಿಜಯಪುರ : ಹೆಣ್ಣಾಗಿ ಜನಿಸಿ ಗಂಡಾಡಿ ಪರಿವರ್ತನೆಗೊಂಡಿದ್ದ ವ್ಯಕ್ತಿಯನ್ನು ಹಾಡುಹಗಲೆ ವಿವಸ್ತ್ರಗೊಳಿಸಿ, ಮರ್ಮಾಂಗಕ್ಕೆ ಖಾರದ ಪುಡಿ ಎರಚಿ ಹಲ್ಲೆ ಮಾಡಿದ್ದಕ್ಕಾಗಿ ಪ್ರಕಕರಣ ದಾಖಲಿಸಿಕೊಂಡಿರುವ ಪೊಲೀಸರು ಐವರು ಮಂಗಳಮುಖಿಯರನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ವೈರಲ್ ಆಗಿತ್ತು.
ಇದರಿಂದ ಎಚ್ಚತ್ತ ಪೊಲೀಸರು ಬಾಧಿತನಿಂದ ದೂರು ಪಡೆದು, ಕೃತ್ಯ ನಡೆಸಿದ ಐವರು ಮಂಗಳಮುಖಿಯರ ವಿರುದ್ಧ ದೂರು ದಾಖಲಿಸಿಕೊಂಡು, ಬಂಧಿಸಿದ್ದಾರೆ. ಇದೀಗ ಇಡೀ ಪ್ರಕರಣ ‘ನಾನವಳಲ್ಲ’ ಎಂಬ ಕಥೆಗೆ ತಿರುಗಿದೆ.
ನಗರದ ಬಸ್ ನಿಲ್ದಾಣದ ಪರಿಸರದಲ್ಲಿ ಜೂನ್ 21 ರಂದು ಮುಂಗಳಮುಖಿಯರ ಗುಂಪು ಪ್ಯಾಂಟ್ ಧರಿಸಿದ್ದ ಹೆಣ್ಣಿನ ರೂಪದಲ್ಲಿದ್ದ ಓರ್ವ ವ್ಯಕ್ತಿಯ ಮೇಲೆ ದಾಳಿ ನಡೆಸಿ ಸಂಪೂರ್ಣ ವಿವಸ್ತ್ರಗೊಳಿಸಿ, ಗುಪ್ತಾಂಗಕ್ಕೆ ಖಾರದ ಪುಡಿ ಎರಚಿ ಹಲ್ಲೆ ನಡೆಸಿದ್ದರು.
ಸದರಿ ಘಟನೆಯ ಕುರಿತು ಸಾರ್ವಜನಿಕರು ಮಾಡಿಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಉದಯವಾಣಿ ವರದಿ ಪ್ರಕಟಿಸಿತ್ತು.
ಇದರಿಂದ ಎಚ್ಚೆತ್ತ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಬಾಧಿತ ರೇಖಾರೆಡ್ಡಿ ಉರ್ಫ ಸಚಿನ್ ರೆಡ್ಡಿ ಎಂಬ ಲಿಂಗ ಪರಿವರ್ತಿತನಿಂದ ಗೋಲಗುಂಬಜ ಠಾಣೆ ಪೊಲೀಸರು ದೂರು ಪಡೆದು, ಪ್ರಕರಣ ದಾಖಲಿಸಿದ್ದಾರೆ.