ಚನ್ನಮ್ಮನ ಕಿತ್ತೂರು : ಚನ್ನಮ್ಮನ ಕಿತ್ತೂರು, ಸವದತ್ತಿ, ಖಾನಾಪುರ,ಬೈಲಹೊಂಗಲ ಸೇರಿ ವಿವಿಧ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ ಆರೋಪಿಗಳನ್ನು ಚನ್ನಮ್ಮನ ಕಿತ್ತೂರು ಪೊಲೀಸರು ಬಂಧಿಸಿದ್ದಾರೆ.
ಚನ್ನಮ್ಮನ ಕಿತ್ತೂರು ತಾಲೂಕಿನ ದೇಮಟ್ಟಿ ಗ್ರಾಮದ ಪುಂಡಲೀಕ ಸಿದ್ದಪ್ಪ ಕುರಿ (37) ಹಾಗೂ ಸುಲೇಮಾನ ರೆಹಮಾನಸಾಬ ಹವಾಲ್ದಾರ್(30) ಆರೋಪಿಗಳು.

ಬೈಕ್ ಕಳ್ಳತನ ಮಾಡಿ ಬೇರೆ ಬೇರೆ ಗ್ರಾಮಗಳಲ್ಲಿ ಮಾರಾಟ ಮಾಡಿದ್ದ ಪ್ರಕರಣವನ್ನು ಬೆನ್ನತ್ತಿದ ಚನ್ನಮ್ಮನ ಕಿತ್ತೂರು ಪೊಲೀಸರು ಆರೋಪಿಗಳಿಂದ ವಿವಿಧ ಕಂಪನಿಯ ಸುಮಾರು ರೂ 5 ಲಕ್ಷ ಮೌಲ್ಯದ 11 ಬೈಕ್ ವಶಪಡಿಸಿಕೊಂಡಿದ್ದಾರೆ.
ಬೈಲಹೊಂಗಲ ಡಿವೈಎಸ್‌ಪಿ ರವಿ ನಾಯಕ, ಚನ್ನಮ್ಮನ ಕಿತ್ತೂರು ಹಾಗೂ ನಂದಗಡ ಪ್ರಭಾರಿ ಸಿಪಿಐ ಎಸ್. ಸಿ ಪಾಟೀಲ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಪ್ರವೀಣ ಗಂಗೋಳ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಳಗಾವಿ ಎಸ್ ಪಿ ಡಾ ಭೀಮಾಶಂಕರ ಗುಳೇದ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಶೃತಿ, ಆರ್.ಬಿ ಬಸರಗಿ ಅವರು ಚನ್ನಮ್ಮನ ಕಿತ್ತೂರು ಪೊಲೀಸರ ಕಾರ್ಯಾಚರಣೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
Laxmi News 24×7