ಶೃಂಗೇರಿ: ಭಾರಿ ಮಳೆಗೆ ಮಲೆನಾಡು ಅಕ್ಷರಶ ಕಂಗಾಲಾಗಿದೆ, ತುಂಗೆಯ ಅಬ್ಬರಕ್ಕೆ ನೂರಾರು ಎಕರೆ ಹೊಲ – ಗದ್ದೆ-ತೋಟಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.
ಶೃಂಗೇರಿ ದೇಗುಲದ ಪಾರ್ಕಿಂಗ್ ಪ್ರದೇಶ, ಗಾಂಧಿ ಮೈದಾನವೂ ಜಲಾವೃತಗೊಂಡಿದ್ದು, ಶೃಂಗೇರಿ ದೇಗುಲದ ಕಪ್ಪೆಶಂಕರ ನಾರಾಯಣ ದೇಗುಲ, ಗುರುಗಳ ಸಂಧ್ಯಾವಂದನೆ ಮಂಟಪವೂ ಜಲಾವೃತಗೊಂಡಿದೆ.
ಗಾಂಧಿ ಮೈಧಾನದಲ್ಲಿರುವ ಅಂಗಡಿಗಳು ಅರ್ಧ ಮುಳುಗಿದ್ದು ತುಂಗಾ ನದಿ ಅಬ್ಬರಕ್ಕೆ ಶೃಂಗೇರಿ ಜನರ ಬದುಕೇ ಅತಂತ್ರಗೊಂಡಿದೆ.