ಹುಬ್ಬಳ್ಳಿ, ಆಗಸ್ಟ್ 01: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪದಲ್ಲಿ ನಟ ದರ್ಶನ್ ಬೆಂಗಳೂರು ಸೆಂಟ್ರಲ್ ಜೈಲು ಸೇರಿದ್ದಾರೆ. ನಟ ದರ್ಶನ್ ಹುಬ್ಬಳ್ಳಿಗೆ ಹೋದಾಗ ಅಲ್ಲಿನ ಶ್ರೀ ಸಿದ್ಧರೂಢ ಮಠಕ್ಕೆ ಕೆಲವು ಭಾರಿ ಭೇಟಿ ನೀಡಿದ್ದರು. ಶ್ರೀಗಳ ಗದ್ದುಗೆಯ ಆಶೀರ್ವಾದ ಪಡೆಯುತ್ತಿದ್ದರು.
ಇದೀಗ ಇದೇ ಮಠದ ಪ್ರಸಾದ ಮತ್ತು ಕೃತಿ ಕೋರಿಯರ್ ಮೂಲಕ ಜೈಲಿಗೆ ಕಳಹಿಸಲಾಗಿದೆ.
ಹೌದು, ಕೊಲೆ ಆರೋಪಿಯಾಗಿ ಸುಮಾರು 50 ದಿನಗಳಿಂದ ಜೈಲಿನಲ್ಲಿ ವಿಚಾರಣಾಧೀನ ಖೈದಿಯಾಗಿರುವ ನಟ ದರ್ಶನ್‌ಗೆ ಹುಬ್ಬಳ್ಳಿ ಶ್ರೀ ಸಿದ್ಧಾರೂಢ ಅಜ್ಜನ ಚರಿತ್ರೆಯ ಕೃತಿಯನ್ನು ಶ್ರೀಮಠದ ಧರ್ಮದರ್ಶಿ ಡಾ.ಗೋವಿಂದ ಮಣ್ಣೂರ ವೈಯಕ್ತಿಕವಾಗಿ ಕಳುಹಿಸಿಕೊಟ್ಟಿದ್ದಾರೆ.
ಕೃತಿ-ಪ್ರಸಾದ ಕೋರಿಯರ್ ಮಾಡಿದ್ದೇಕೆ?
ಬೆಂಗಳೂರು ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ ಈ ಹಿಂದೆ ತಮಗೆ ಓದಲು ಪುಸ್ತಕಗಳ ವ್ಯವಸ್ಥೆ ಮಾಡಿ ಎಂದು ಜೈಲಧಿಕಾರಿಗಳಿಗೆ ಮನವಿ ಮಾಡಿದ್ದರು. ಜೈಲಲ್ಲಿರುವ ಕಾರಣ ಅವರ ಆತ್ಮಬಲ ಕುಸಿದಿದೆ. ಹೀಗಾಗಿ ನಾನು ಶ್ರೀ ಸಿದ್ಧಾರೂಢ ಅಜ್ಜನ ಚರಿತ್ರೆಯ ಕೃತಿ ಮತ್ತು ಪ್ರಸಾದವನ್ನು ಜೈಲಿಗೆ ಕೋರಿಯರ್ ಮಾಡಿದ್ದೇನೆ ಎಂದು ಧರ್ಮದರ್ಶಿಗಳು ತಿಳಿಸಿದ್ದಾರೆ.