ಕೊಪ್ಪಳ, ಆಗಸ್ಟ್ 1: ರಕ್ತದಾನ ಶ್ರೇಷ್ಠ ದಾನ ಎನ್ನುತ್ತಾರೆ. ಆದರೆ, ಇತ್ತೀಚೆಗೆ ಸೂಕ್ತ ಸಮಯದಲ್ಲಿ ರಕ್ತ ಸಿಗದೆ ಅನೇಕರು ಮೃತಪಡುತ್ತಿರುವ ಘಟನೆಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ಮನುಷ್ಯರೇ ಮನುಷ್ಯರಿಗೆ ರಕ್ತದಾನ ಮಾಡಿ ಜೀವ ಉಳಿಸಲು ಹಿಂದುಮುಂದು ನೋಡುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಒಂದು ನಾಯಿ ಇನ್ನೊಂದು ನಾಯಿ ಜೀವ ಉಳಿಸಲು ರಕ್ತದಾನ ಮಾಡಿರುವ ಅಪರೂಪದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಇದು ಅಚ್ಚರಿಯನಿಸಿದರು ಕೂಡಾ ನಿಜ.
ಕೊಪ್ಪಳದಲ್ಲಿ ಬುಧವಾರ ಸಾಕಿದ ನಾಯಿಯೊಂದು ಮತ್ತೊಂದು ನಾಯಿಗೆ ರಕ್ತದಾನ ಮಾಡುವ ಮೂಲಕ ಗಮನ ಸೆಳೆದಿದೆ. ನಗರದ ಪಶು ಚಿಕಿತ್ಸಾಲಯದಲ್ಲಿ, ಪ್ರಾಧ್ಯಾಪಕ ಬಸವರಾಜ ಪೂಜಾರ್ರವರ ಸಾಕು ನಾಯಿ ಮೂರು ವಷ೯ದ ಭೈರವನಿಂದ (ಡಾಬರ್ ಮ್ಯಾನ್) ರಕ್ತದಾನ ಮಾಡಿಸಲಾಗಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ, ಹಿಮೋಗ್ಲೊಬಿನ್ ಶಕ್ತಿ ಮೂರಕ್ಕೆ ತಲುಪಿದ್ದ ನಗರದ್ದೇ ಆದ 9 ವರ್ಷದ ಲ್ಯಾಬರ್ ಡಾಗ್ ನಾಯಿಗೆ ರಕ್ತದ ಅತ್ಯವಶ್ಯಕವಾಗಿತ್ತು. ಇದನ್ನು ಅರಿತ ವೈದ್ಯರು ನಗರದ ಮೂರು ನಾಯಿಗಳ ಮಾಲೀಕರ ವಿಳಾಸಗಳನ್ನು ಸಂಪಕಿ೯ಸಿ ಕರೆಸಿ ಅವುಗಳ ರಕ್ತದ ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಿದರು.