Breaking News

NDA ಮೈತ್ರಿಕೂಟದಲ್ಲಿ ಮೂಡಿದ ಒಡಕು? ಬಿಜೆಪಿ ವಿರುದ್ಧವೇ ಕೇಂದ್ರ ಸಚಿವ HD ಕುಮಾರಸ್ವಾಮಿ ಕಿಡಿ!

Spread the love

NDA ಮೈತ್ರಿಕೂಟದಲ್ಲಿ ಮೂಡಿದ ಒಡಕು? ಬಿಜೆಪಿ ವಿರುದ್ಧವೇ ಕೇಂದ್ರ ಸಚಿವ HD ಕುಮಾರಸ್ವಾಮಿ ಕಿಡಿ!

NDA ಮೈತ್ರಿಕೂಟದಲ್ಲಿ ಮೂಡಿದ ಒಡಕು? ಬಿಜೆಪಿ ವಿರುದ್ಧವೇ ಕೇಂದ್ರ ಸಚಿವ HD ಕುಮಾರಸ್ವಾಮಿ ಕಿಡಿ! ಆಗಿದ್ದೇನು

ವದೆಹಲಿ: ಕೇಂದ್ರದಲ್ಲಿ ನರೇಂದ್ರ ಮೋದಿ (Narendra Modi) ನೇತೃತ್ವದ ಎನ್‌ಡಿಎ ಸರ್ಕಾರ (NDA Govt) ಆಡಳಿತಕ್ಕೆ ಬಂದು ಒಂದು ತಿಂಗಳು ಕಳೆಯುತ್ತಿದೆ. ಕರ್ನಾಟಕದಲ್ಲಿ ಬಿಜೆಪಿ ಜೊತೆ ಜೆಡಿಎಸ್‌ ಕೂಡ ಮೈತ್ರಿ ಮಾಡಿಕೊಂಡ ಪರಿಣಾಮ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಕೇಂದ್ರ ಸಚಿವ ಸ್ಥಾನವನ್ನು ದಕ್ಕಿಸಿಕೊಂಡಿದ್ದಾರೆ.

ಆದರೆ ಇದೀಗ ಅಚ್ಚರಿಯ ಸಂಗತಿಯೊಂದು ದಿಢೀರನೇ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗ್ತಿದೆ.

ಹೌದು.. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿರುವ ಜೆಡಿಎಸ್ ನಾಯಕ, ಎಚ್‌ಡಿ ಕುಮಾರಸ್ವಾಮಿ ಇದೀಗ ಬಿಜೆಪಿ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಕೇಂದ್ರದಲ್ಲಿ ಮೈತ್ರಿ ಸರ್ಕಾರ ಆಡಳಿತಕ್ಕೆ ಬಂದ ಒಂದೆ ತಿಂಗಳಲ್ಲಿ ಎನ್‌ಡಿಎ ಮೈತ್ರಿಯಲ್ಲಿ ಬಿರುಕು ಮೂಡಿದ್ದು, ದೆಹಲಿಯಲ್ಲಿ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಅಂದ ಹಾಗೆ, ರಾಜ್ಯ ಕಾಂಗ್ರೆಸ್ ಸರ್ಕಾರದ ಹಗರಣಗಳ ವಿರುದ್ಧ ಹೋರಾಟ ನಡೆಸಲು ಬಿಜೆಪಿ ಪಾದಯಾತ್ರೆಗೆ ಮುಂದಾಗಿದ್ದು, ಈ ಪಾದಯಾತ್ರೆಗೆ ಜೆಡಿಎಸ್‌ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಅನ್ನೋದು ಎಚ್‌ಡಿ ಕುಮಾರಸ್ವಾಮಿಗೆ ಕೋಪ ತರಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿರುವ ಕುಮಾರಸ್ವಾಮಿ, ಪಾದಯಾತ್ರೆಗೆ ನಮ್ಮನ್ನು ವಿಶ್ವಾಸಕ್ಕೆೇ ತೆಗೆದುಕೊಂಡಿಲ್ಲ ನಮ್ಮ ಶಕ್ತಿ ಇರೋದು ಬೆಂಗಳೂರಿಂದ ಮೈಸೂರುವರೆಗೆ. ವಿಶ್ವಾಸಕ್ಕೆ ತೆಗೆಕೊಳ್ಳದೇ ಹೋದಾಗ ನಾವೇಕೆ ಪಾದಯಾತ್ರೆಗೆ ಬೆಂಬಲ ಕೊಡಬೇಕು? ಎಂದು ಪ್ರಶ್ನಿಸುವ ಮೂಲಕ ಪಾದಯಾತ್ರೆಯಿಂದ ಹಿಂದೆ ಸರಿಯುವ ಮುನ್ಸೂಚನೆ ನೀಡಿದ್ದಾರೆ.

ಈ ಸಂಬಂಧ ಮಾತನಾಡಿರುವ ಎಚ್‌ಡಿಕೆ, ‘ರಾಜಕಾರಣ ಬೇರೆ, ಈ ರೀತಿ ಕಾರ್ಯಕ್ರಮದಿಂದ ಏನು ಸಾಧನೆ ಮಾಡಲು ಸಾಧ್ಯ? ಬಿಜೆಪಿಯವರು ನಡೆದುಕೊಂಡ ರೀತಿ ನನ್ನ ಮನಸ್ಸಿಗೆ ನೋವಾಗಿದೆ. ಪಾದಯಾತ್ರೆ ಮುಖ್ಯಸ್ಥರನ್ನಾಗಿ ಯಾರನ್ನ ಮಾಡಿದ್ದಾರೆ? ಯಾರು ಈ ಪ್ರೀತಂಗೌಡ? ದೇವೇಗೌಡರ ಕುಟುಂಬವನ್ನ ಸರ್ವನಾಶ ಮಾಡಲು ಹೊರಟಿದ್ದವ. ಅವನನ್ನು ಸಭೆಗೆ ಕರಿತಾರೆ, ಅದಕ್ಕೆ ನನ್ನನ್ನೂ ಕರೀತಾರೆ, ನನಗೂ ಸಹಿಸೋಕೆ ಇತಿ ಮಿತಿ ಇದೆ ಎಂದು ಬಿಜೆಪಿ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರ ಹಾಕಿದ್ದಾರೆ


Spread the love

About Laxminews 24x7

Check Also

ನವೆಂಬರ 9 ರಂದು ನಡೆಯಲಿರುವ ಗೋಕಾಕ ಹಿಲ್ ಹಾಫ್ ಮ್ಯಾರಥಾನ್ ಕಾರ್ಯಕ್ರಮ

Spread the love ನವೆಂಬರ 9 ರಂದು ನಡೆಯಲಿರುವ ಗೋಕಾಕ ಹಿಲ್ ಹಾಫ್ ಮ್ಯಾರಥಾನ್ ಕಾರ್ಯಕ್ರಮಕ್ಕೆ ಬೆಳಗಾವಿ ಮರಾಠಾ ಲಘು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ