Breaking News

ತಿಂಗಳಲ್ಲೇ ಕಿತ್ತು ಹೋದ ಡಾಂಬರು

Spread the love

ಚಿಂಚೋಳಿ: ಪಟ್ಟಣದ ಹೊರವಲಯದ ಸಿದ್ಧಸಿರಿ ಎಥೆನಾಲ್ ಕಂಪನಿಯಿಂದ ಚಿಮ್ಮಾಈದಲಾಯಿ ಗ್ರಾಮದವರೆಗೆ ಲೋಕೋಪಯೋಗಿ ಇಲಾಖೆ ನಡೆಸಿದ ರಸ್ತೆ ಕಾಮಗಾರಿ ಹಳ್ಳ ಹಿಡಿದಿದೆ. ಮಳೆಯನ್ನೂ ಲೆಕ್ಕಿಸದೇ ರಸ್ತೆಗೆ ಹಾಕಿದ್ದ ಡಾಂಬರು ಒಂದು ವಾರದೊಳಗೆ ಕಿತ್ತುಹೋಗಿದ್ದು,ರಸ್ತೆ ಹದಗೆಟ್ಟಿದೆ.

 

ಹೆದ್ದಾರಿಯ ಅಗಲೀಕರಣ, ಡಾಂಬರೀಕರಣ ಸೇರಿದಂತೆ ಹಲವು ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ.

2023ರ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಕಾಮಗಾರಿ ಆರಂಭಿಸಿ ರಸ್ತೆಯ ಎರಡು ಬದಿಯ ಭುಜವನ್ನು ಅಗೆದು ಮುರುಮ್ ಮತ್ತು ಕಾಂಕ್ರಿಟ್ ಭರ್ತಿ ಮಾಡುವುದರ ಜತೆಗೆ ಕಲವರ್ಟ ಕಾಮಗಾರಿ ನಡೆಸಲಾಗಿತ್ತು. ಆದರೆ ಡಾಂಬರೀಕರಣ ಕಾಮಗಾರಿ ಕೈಗೊಳ್ಳದೇ ವರ್ಷದಿಂದ ವಿಳಂಬ ಮಾಡಿದ್ದರು. ಆದರೆ ಮಳೆಗಾಲ ಆರಂಭವಾದ ಮೇಲೆ ಜೂನ್ ತಿಂಗಳಲ್ಲಿ ಡಾಂಬರೀಕರಣ
ನಡೆಸಿದ್ದರು.

ತಳಪಾಯದಲ್ಲಿ ಸರಿಯಲ್ಲಿ ಪ್ಯಾಚ್ ವರ್ಕ ಮಾಡದಿರುವುದು ಮತ್ತು ಮಳೆಗಾಲದಲ್ಲಿ ಡಾಂಬರೀಕರಣ ಕೈಗೊಂಡಿದ್ದರಿಂದ 5 ಕಿ.ಮೀ ಉದ್ದದ ರಸ್ತೆಯಲ್ಲಿ ಹಲವೆಡೆ ರಸ್ತೆ ಹಾಳಾಗಿದೆ. ಇನ್ನೂ ಕೆಲವು ದಿನಗಳಲ್ಲಿಯೇ ರಸ್ತೆ ಕಿತ್ತು ಹೋಗುವ ಸಾಧ್ಯತೆ ಹೆಚ್ಚಾಗಿದೆ. ಡಾಂಬರೀಕರಣ ರಸ್ತೆಯಾದರೂ ಅಲ್ಲಲ್ಲಿ ನೀರು ಹಿಡಿಯುತ್ತಿರುವುದರಿಂದ ಬೇಗ ಹಾಳಾಗುತ್ತಿದೆ.

ಈಗಾಗಲೇ ಹಲವು ಕಡೆಗಳಲ್ಲಿ ಹಾಳಾಗಿ ಡಾಂಬರಿಕರಣ ಜಲ್ಲಿ ಕಲ್ಲಿನ ದೂರು ಮತ್ತು ಮಣ್ಣು ತೇಲುತ್ತಿದೆ. ಅಂದಾಜು ₹ 5 ಕೋಟಿ ಮೊತ್ತದ ಈ ಹೆದ್ದಾರಿ ಸುಧಾರಣೆ ಕಾಮಗಾರಿ ಕಳಪೆ ಕಾಮಗಾರಿಗೆ ಬಲಿಯಾಗಿದ್ದಕ್ಕೆ ಸ್ಥಳೀಯರು ತೀವ್ರ
ಅಸಮಧಾನ ವ್ಯಕ್ತಪಡಿಸಿದ್ದಾರೆ


Spread the love

About Laxminews 24x7

Check Also

ಬಳ್ಳಾರಿ: ಪ್ರೀತಿಸಿದ್ದಕ್ಕೆ ಯುವಕನ ಕೊಲೆ; ಯುವತಿಯ ತಂದೆ, ಅಣ್ಣನ ಬಂಧನ

Spread the loveಬಳ್ಳಾರಿ: ಮಗಳನ್ನು ಪ್ರೀತಿಸದಂತೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಪ್ರೀತಿಸುತ್ತಿದ್ದ ಯುವಕನನ್ನು ಹುಡುಗಿಯ ತಂದೆ ಹಾಗೂ ಅಣ್ಣ ಸೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ