Breaking News

ಬಿಡುವು ನೀಡಿದ ಮಳೆ: ಗರಿಗೆದರಿದ ಕೃಷಿ ಚಟುವಟಿಕೆ

Spread the love

ಶಿರಾಳಕೊಪ್ಪ: ಎರಡು ವಾರಗಳಿಂದ ಸತತವಾಗಿ ಸುರಿಸುತ್ತಿದ್ದ ಮಳೆ ಸ್ವಲ್ಪ ಬಿಡುವು ಕೊಟ್ಟ ಹಿನ್ನೆಲೆಯಲ್ಲಿ ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.

ಭತ್ತದ ಸಸಿ ನೆಡುವುದು, ಅಡಿಕೆ ಅಡಿಕೆ ಆರಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಹೊಲಗಳಲ್ಲಿ ರೈತ ಮಹಿಳೆಯರು ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ.

ಶಿರಾಳಕೊಪ್ಪ | ಬಿಡುವು ನೀಡಿದ ಮಳೆ: ಗರಿಗೆದರಿದ ಕೃಷಿ ಚಟುವಟಿಕೆ

ಅಲ್ಲಲ್ಲಿ ಜೋಳದ ಬೆಳೆಗಳು ಜೌಗಿನಿಂದ ಕೆಂಪಾಗುತ್ತಿದ್ದು, ಇಳುವರಿ ಕುಂಠಿತವಾಗುವ ಭೀತಿ ಎದುರಾಗಿದೆ.

ಕಳೆದ ವರ್ಷ ಭೀಕರ ಬರಗಾಲದಿಂದ ರೈತರು ತೋಟ ಉಳಿಸಿಕೊಳ್ಳಲು ಕಷ್ಟಪಟ್ಟಿದ್ದರು. ಈ ಬಾರಿ ತಾಳಗುಂದದ ಪ್ರಣವೇಶ್ವರ ಕೆರೆ, ಬಳ್ಳಿಗಾವಿಯ ಜಿಡ್ಡಿಕೆರೆ, ಬಸವಂದಿಹಳ್ಳಿ ಕೆರೆ, ಹಿರೆಜಂಬೂರು, ಮಳೂರು, ತಡಗಣಿ, ಕೌಲಿ, ತೊಗರ್ಸಿ, ಕೊಳಗಿ, ಯಳಗೆರಿ, ನರಸಾಪುರ, ಶಂಕ್ರಿಕೊಪ್ಪ, ಕಣಸೋಗಿ ಸೇರಿದಂತೆ ತಾಳಗುಂದ ಹಾಗೂ ಉಡುಗಣಿ ಹೋಬಳಿಯ ಎಲ್ಲಾ ಕೆರೆಗಳು ಭರ್ತಿಯಾಗಿದ್ದು, ರೈತರು ಹರ್ಷಗೊಂಡಿದ್ದಾರೆ.

‘ಬರಗಾಲದಿಂದ ಬದುಕು ಕಳೆದುಕೊಂಡಿದ್ದ ರೈತರಿಗೆ ಈ ಮಳೆಯು ಮತ್ತೊಂದು ಜನ್ಮ ನೀಡಿದೆ’ ಎಂದು ಹಿರೇಜಂಬೂರಿನ ರೈತ ಯಶವಂತ್‌ ಕುಮಾರ್ ಸಂತಸ ಹಂಚಿಕೊಂಡರು.


Spread the love

About Laxminews 24x7

Check Also

ಡಿಕೆಶಿ ಪಕ್ಷದ ಅಧ್ಯಕ್ಷರು. ರಾಜಣ್ಣ ಪಕ್ಷದ ಶಾಸಕರು. ಅವರಿಬ್ಬರು ಭೇಟಿ ಆಗಿರುವುದರಲ್ಲಿ ತಪ್ಪೇನಿದೆ ಎಂದ ಶಾಸಕ ಲಕ್ಷ್ಮಣ್​​

Spread the loveಚಿಕ್ಕೋಡಿ: “ಡಿಸಿಎಂ ಡಿ.ಕೆ.ಶಿವಕುಮಾರ್​​​ ಮತ್ತು ಮಾಜಿ ಸಚಿವ ಕೆ.ಎನ್​​.ರಾಜಣ್ಣ ಭೇಟಿ ಆಗಿರುವುದಲ್ಲಿ ತಪ್ಪೇನು? ಅವರು ಪಕ್ಷದ ಅಧ್ಯಕ್ಷರು, ಇವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ